alex Certify
ಕನ್ನಡ ದುನಿಯಾ       Mobile App
       

Kannada Duniya

ಆಗಸ್ಟ್ 15ರಿಂದ ಶುರುವಾಗ್ತಿದೆ ಜಿಯೋಗಿಗಾ ಫೈಬರ್ ನೋಂದಣಿ

ರಿಲಾಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ 41ನೇ ವಾರ್ಷಿಕ ಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದರು. ಒಂದು ಜಿಯೋ-2 ಫೋನ್. ಇನ್ನೊಂದು ಗಿಗಾಫೈಬರ್ ಬ್ರಾಡ್ಬ್ಯಾಂಡ್. ಇನ್ನೇನು ಕೆಲವೇ ದಿನಗಳಲ್ಲಿ ಇದ್ರ ನೋಂದಣಿ ಶುರುವಾಗಲಿದೆ.

ಜಿಯೋ ಗಿಗಾ ಫೈಬರ್ ಬ್ರಾಡ್ಬ್ಯಾಂಡ್ ಸೇವೆಗೆ ನೋಂದಣಿ ಆಗಸ್ಟ್ 15ರಿಂದ ಶುರುವಾಗಲಿದೆ. ಈ ಮೂಲಕ ಜಿಯೋ ಬ್ರಾಡ್ಬ್ಯಾಂಡ್ ಕ್ಷೇತ್ರಕ್ಕೆ ಲಗ್ಗೆಯಿಡಲಿದೆ. ವಿಶೇಷವೆಂದ್ರೆ ಕಂಪನಿ ಗಿಗಾ ಫೈಬರ್ ಬ್ರಾಡ್ಬ್ಯಾಂಡ್ ಜೊತೆ ಡಿಟಿಹೆಚ್ ಕನೆಕ್ಷನ್ ಕೂಡ ನೀಡಲಿದೆ. ಇದ್ರಲ್ಲಿ ಬಳಕೆದಾರರಿಗೆ ಸ್ಮಾರ್ಟ್ ಹೋಂ ಸೌಲಭ್ಯ ಸಿಗಲಿದೆ.

ನೋಂದಣಿಗೂ ಮುನ್ನ ಗಿಗಾ ಫೈಬರ್ ಬ್ರಾಡ್ಬ್ಯಾಂಡ್ ನಲ್ಲಿ ಏನೆಲ್ಲ ಸೌಲಭ್ಯ ಸಿಗಲಿದೆ ಎಂಬುದನ್ನು ನೀವೂ ತಿಳಿದುಕೊಳ್ಳಿ. ಜಿಯೋಗಿಗಾ ಫೈಬರ್ ಬ್ರಾಡ್ಬ್ಯಾಂಡ್ ಗ್ರಾಹಕರಿಗೆ ರೌಟರ್ ಜೊತೆ ಸೆಟ್ ಆಪ್ ಬಾಕ್ಸ್ ಕೂಡ ಸಿಗಲಿದೆ. ಈ ಸೆಟ್ ಆಪ್ ಬಾಕ್ಸ್ ಮೂಲಕ ಗ್ರಾಹಕರು ಗಿಗಾಟಿವಿ ವೀಕ್ಷಣೆ ಮಾಡಬಹುದಾಗಿದೆ. ಇದಲ್ಲದೆ ಹೆಚ್ಡಿ ವಿಡಿಯೋ ಕಾಲ್ ಸೇವೆ ಕೂಡ ಸಿಗಲಿದೆ. ಈ ಸೌಲಭ್ಯ ದೇಶದ 1100 ನಗರಗಳಿಗೆ ಸಿಗಲಿದೆ.

ಜಿಯೋ ಆ್ಯಪ್ ಅಥವಾ ಜಿಯೋ ವೆಬ್ಸೈಟ್ ನಲ್ಲಿ ಗಿಗಾಫೈಬರ್ ಬುಕ್ ಮಾಡಬಹುದು. ಆಗಸ್ಟ್ 15 ರಿಂದ ನೋಂದಣಿ ಶುರುವಾಗಲಿದೆ. ಸೇವೆ ಸಕ್ರಿಯಗೊಂಡ ನಂತ್ರ ಜಿಯೋ ಸರ್ವಿಸ್ ಇಂಜಿನಿಯರ್ಸ್ ಮನೆಗೆ ಬಂದು ಕನೆಕ್ಷನ್ ನೀಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...