alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ-ಏರ್ ಟೆಲ್ ನಡುವೆ ನಡೆದಿದೆ ಜಟಾಪಟಿ

jio-air

ನವದೆಹಲಿ: ರಿಲಯನ್ಸ್ ಜಿಯೋ ಬಂದ ನಂತರದಲ್ಲಿ ಮೊಬೈಲ್ ಸೇವಾ ಕ್ಷೇತ್ರದಲ್ಲಿ ಅಲ್ಲೋಲಕಲ್ಲೋಲವಾಗಿರುವುದು ನಿಮಗೆ ತಿಳಿದೇ ಇದೆ.

ಜಿಯೋ ಜೊತೆಗೆ ಪೈಪೋಟಿಗೆ ಇಳಿದಿರುವ ಮೊಬೈಲ್ ಸೇವಾ ಕಂಪನಿಗಳು ಕೊಡುಗೆಗಳ ಮೇಲೆ ಕೊಡುಗೆ ನೀಡಿ ಗ್ರಾಹಕರನ್ನು ಸೆಳೆಯುತ್ತಿವೆ.

ಕಂಪನಿಗಳ ನಡುವಿನ ಸ್ಪರ್ಧೆ ಮತ್ತೊಂದು ಹಂತ ತಲುಪಿದೆ. ಏರ್ ಟೆಲ್ ಸುಳ್ಳು ಜಾಹೀರಾತು ಪ್ರಕಟಿಸಿದೆ ಎಂದು ಜಿಯೋ ಭಾರತೀಯ ಜಾಹೀರಾತು ಗುಣಮಟ್ಟ ಮಾನದಂಡ ಮಂಡಳಿಗೆ ದೂರು ನೀಡಿದೆ.

ಏರ್ ಟೆಲ್ ಡೇಟಾ ಸ್ಪೀಡ್ ಆಫ್ ಟೆಸ್ಟ್ ನಲ್ಲಿ ವೇಗದ ಇಂಟರ್ ನೆಟ್ ಸಂಪರ್ಕವನ್ನು ನೀಡುತ್ತಿದೆ ಎಂದು ಜಾಹೀರಾತು ಪ್ರಕಟಿಸಿ ಜನರಿಗೆ ಸುಳ್ಳು ಮಾಹಿತಿ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಮತ್ತು ಮೈ ಸ್ಪೀಡ್ ಅಪ್ಲಿಕೇಷನ್ ಫಲಿತಾಂಶದ ಪ್ರಕಾರ, ದೇಶದಲ್ಲಿ ವೇಗದ ಇಂಟರ್ ನೆಟ್ ಸಂಪರ್ಕವನ್ನು ಜಿಯೋ ನೀಡುತ್ತಿದೆ. ಹೀಗಿದ್ದರೂ, ಸುಳ್ಳು ಜಾಹೀರಾತು ನೀಡಿ ಗ್ರಾಹಕರನ್ನು ವಂಚಿಸುತ್ತಿರುವ ಏರ್ ಟೆಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಯೋ, ಜಾಹೀರಾತು ಗುಣಮಟ್ಟ ಮಾನದಂಡ ಮಂಡಳಿಗೆ ದೂರು ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...