alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಡಬಲ್ ಧಮಾಕಾ: ಗ್ರಾಹಕರಿಗೆ ಸಿಗ್ತಿದೆ ಹೆಚ್ಚುವರಿ 1.5 ಜಿಬಿ ಡೇಟಾ

ರಿಲಾಯನ್ಸ್ ಜಿಯೋ ಡಬಲ್ ಧಮಾಕಾ ಆಫರ್ ಬಿಡುಗಡೆ ಮಾಡಿದೆ. ಈ ಆಫರ್ ನಲ್ಲಿ ಪ್ರತಿ ಗ್ರಾಹಕರಿಗೆ 1.5 ಜಿಬಿ ಹೆಚ್ಚುವರಿ ಡೇಟಾ ಸಿಗಲಿದೆ. ಜೂನ್ 30ರೊಳಗೆ ರಿಚಾರ್ಜ್ ಮಾಡಿದ ಎಲ್ಲ ಗ್ರಾಹಕರಿಗೆ ಈ ಆಫರ್ ಸಿಗಲಿದೆ.

ಏರ್ಟೆಲ್ ಗೆ ಟಕ್ಕರ್ ನೀಡಲು ಜಿಯೋ ಈ ಆಫರ್ ಶುರು ಮಾಡಿದೆ. ಕೆಲ ದಿನಗಳ ಹಿಂದಷ್ಟೇ ಏರ್ಟೆಲ್ ತನ್ನ ಪ್ಲಾನ್ ನಲ್ಲಿ ಬದಲಾವಣೆ ಮಾಡಿತ್ತು. ಹೆಚ್ಚುವರಿ ಡೇಟಾ ನೀಡುವುದಾಗಿ ಘೋಷಣೆ ಮಾಡಿತ್ತು. ಇದಕ್ಕೆ ಉತ್ತರವಾಗಿ ಜಿಯೋ ತನ್ನ ಎಲ್ಲ ಗ್ರಾಹಕರಿಗೂ ಹೆಚ್ಚುವರಿ ಡೇಟಾ ನೀಡುವ ಘೋಷಣೆ ಮಾಡಿದೆ.

ಟೆಲಿಕಾಂ ಕ್ಷೇತ್ರದಲ್ಲಿ ಏರ್ಟೆಲ್ ಹಾಗೂ ಜಿಯೋ ಡೇಟಾ ಯುದ್ಧ ಮುಂದುವರೆದಿದೆ. ಒಂದೇ ಬೆಲೆ ಹಾಗೂ ಒಂದೇ ಡೇಟಾವನ್ನು ಈ ಎರಡೂ ಕಂಪನಿಗಳು ಗ್ರಾಹಕರಿಗೆ ನೀಡ್ತಿವೆ. ಒಂದು ಕಂಪನಿ ಹೊಸ ಪ್ಲಾನ್ ಶುರು ಮಾಡಿದ್ರೆ ಅದಕ್ಕೆ ಟಕ್ಕರ್ ನೀಡಲು ಇನ್ನೊಂದು ಕಂಪನಿ ಹೊಸ ಪ್ಲಾನ್ ಮಾರುಕಟ್ಟೆಗೆ ಬಿಡ್ತಿದೆ.

ಏರ್ಟೆಲ್ 98 ಪ್ಲಾನ್ ನಲ್ಲಿ 3 ಜಿಬಿ ಡೇಟಾ ನೀಡ್ತಿದೆ. ಜಿಯೋ ಕೂಡ 98 ಪ್ಲಾನ್ ನಲ್ಲಿ 2 ಜಿಬಿ ಡೇಟಾ ಜೊತೆ ಅನಿಯಮಿತ ಕರೆ ಸೌಲಭ್ಯ ನೀಡಿದೆ. 149 ರೂಪಾಯಿ ಪ್ಲಾನ್, 199 ರೂಪಾಯಿ ಪ್ಲಾನ್ ಸೇರಿದಂತೆ ಅನೇಕ ಪ್ಲಾನ್ ಗಳು ಒಂದೇ ರೀತಿಯಲ್ಲಿವೆ. ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿ ಗ್ರಾಹಕರನ್ನು ಸೆಳೆಯಲು ಎರಡೂ ಕಂಪನಿಗಳು ಯತ್ನಿಸುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...