alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಡಿಜಿಟಲ್ ಪ್ಯಾಕ್ ನಲ್ಲಿ ಪ್ರತಿ ದಿನ ಸಿಗಲಿದೆ 2 ಜಿಬಿ ಡೇಟಾ

ರಿಲಯನ್ಸ್ ಜಿಯೋ ಮಾನ್ಸೂನ್ ಋತುವಿನಲ್ಲಿ ಅನೇಕ ಕೊಡುಗೆಗಳನ್ನು ಗ್ರಾಹಕರಿಗೆ ನೀಡ್ತಿದೆ. ಈಗ ಕಂಪನಿ ಪ್ರೀ ಪೇಯ್ಡ್ ಗ್ರಾಹಕರಿಗಾಗಿ ವಿಶೇಷ ಕೊಡುಗೆಯೊಂದನ್ನು ನೀಡ್ತಿದೆ. ಜಿಯೋ ಹೊಸ ಡಿಜಿಟಲ್ ಪ್ಯಾಕ್ ಬಿಡುಗಡೆ ಮಾಡಿದೆ. ಇದು ಆ್ಯಡ್-ಆನ್ ಪ್ಯಾಕ್ ಆಗಿದ್ದು, ಇದನ್ನು ಗ್ರಾಹಕರಿಗೆ ಉಚಿತವಾಗಿ ನೀಡ್ತಿದೆ.

ಈ ಹೊಸ ಡಿಜಿಟಲ್ ಆ್ಯಡ್-ಆನ್ ಪ್ಯಾಕ್ ನಲ್ಲಿ ಕಂಪನಿ ಗ್ರಾಹಕರಿಗೆ ಚಂದಾದಾರ ಯೋಜನೆ ಜೊತೆ ಹೆಚ್ಚುವರಿಯಾಗಿ ಪ್ರತಿ ದಿನ 2 ಜಿಬಿ ಡೇಟಾವನ್ನು ಉಚಿತವಾಗಿ ನೀಡ್ತಿದೆ. ಜಿಯೋದ ಈ ಹೊಸ ಆಫರ್ ಕೇವಲ ಜುಲೈ 30 ರವರೆಗೆ ಮಾತ್ರ ಲಭ್ಯವಿದೆ. ಯಾವ ಯಾವ ಗ್ರಾಹಕರಿಗೆ ಈ ಪ್ಲಾನ್ ನ ಲಾಭ ಸಿಗಲಿದೆ ಎಂಬುದು ಸ್ಪಷ್ಟವಾಗಿಲ್ಲ. ಆದ್ರೆ ಪ್ರೀ ಪೇಯ್ಡ್ ಗ್ರಾಹಕರಿಗೆ ಮಾತ್ರ ಎಂಬ ಮಾಹಿತಿಯಿದೆ.

ಈ ಆಫರ್ ನಲ್ಲಿ ಕರೆ ಹಾಗೂ ಎಸ್ಎಂಎಸ್ ಗೆ ಸಂಬಂಧಿಸಿದಂತೆ ಯಾವುದೇ ಲಾಭ ಗ್ರಾಹಕರಿಗೆ ಸಿಗುವುದಿಲ್ಲ. ಇಷ್ಟರ ಮಧ್ಯೆ 41ನೇ ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಘೋಷಣೆ ಮಾಡಿದಂತೆ ಜಿಯೋ ಫೀಚರ್ ಫೋನ್ ತನ್ನ ಕೆಲಸ ಶುರು ಮಾಡಿದೆ. ಯಾವುದೇ ಹಳೆ ಫೋನ್ ಮಾರಾಟ ಮಾಡಿ ಗ್ರಾಹಕ, ಜಿಯೋ ಫೋನ್ ಖರೀದಿ ಮಾಡಬಹುದಾಗಿದೆ. ಜಿಯೋ ಫೋನ್ ಬೆಲೆ 501 ರೂಪಾಯಿಯಾಗಿದ್ದು, ಮೂರು ವರ್ಷದ ನಂತ್ರ ಈ ಹಣ ವಾಪಸ್ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...