alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್: ಲಭ್ಯವಾಗಲಿದೆ ಮತ್ತೊಂದು ಸೇವೆ

ಭಾರತದಲ್ಲಿ ಕೆಲ ತಿಂಗಳುಗಳ ಕಾಲ ಪುಕ್ಕಟೆಯಾಗಿ ಇಂಟರ್ ನೆಟ್ ಕೊಟ್ಟು ಸ್ಮಾರ್ಟ್ ಫೋನ್ ಗಳ ರುಚಿ ಹತ್ತಿಸಿದ ಜಿಯೋ ತನ್ನ ಪ್ರತಿಸ್ಪರ್ಧಿ ನೆಟ್ ವರ್ಕ್ ಕಂಪನಿಗಳಿಗೆ ಮತ್ತೊಂದು ಶಾಕ್ ಕೊಡಲು ತಯಾರಾಗಿ ನಿಂತಿದೆ.

ವಾಯ್ಸ್ ಓವರ್ ಎಲ್ ಟಿಇ (ವೋಲ್ಟಿ) ಮೂಲಕ 4ಜಿ ಸೇವೆ ನೀಡಿದ ಮೊದಲ ಟೆಲಿಕಾಂ ಸಂಸ್ಥೆ ಎಂಬ ಅಬಿದಾನಕ್ಕೆ ಪಾತ್ರವಾಗಿತ್ತು. ಏರ್ ಟೆಲ್, ವೊಡಾಫೋನ್, ಐಡಿಯಾಗಳೂ ಈ ಸೇವೆಯನ್ನ ಪ್ರಾರಂಭಿಸಿದ್ದವು. ಇದೀಗ ಜಿಯೋ ಈ ಸೇವೆಯನ್ನು ಅಂತಾರಾಷ್ಟ್ರೀಯ ರೋಮಿಂಗ್ ನಲ್ಲೂ ನೀಡಲು ಮುಂದೆ ಬಂದಿದೆ. ಅದಾದಲ್ಲಿ ಈ ಸೇವೆ ಒದಗಿಸಿದ ಭಾರತದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಯೂ ಅದರದ್ದಾಗಲಿದೆ.

ಪ್ರಸ್ತುತ ಅಮೆರಿಕ, ಕೆನಡಾ, ಜಪಾನ್, ಕೊರಿಯಾ, ಸಿಂಗಾಪುರ, ಯುಎಇ, ಹಾಲೆಂಡ್ ಸೇರಿದಂತೆ 187 ದೇಶಗಳಲ್ಲಿ ವೋಲ್ಟಿ ಸೇವೆ ದೊರಕುತ್ತಿದೆ. ಜಪಾನ್ ನ ಕೆಡಿಡಿಐ ಕಾರ್ಪೋರೇಶನ್ ಸಹಯೋಗದೊಂದಿಗೆ ಭಾರತ ಹಾಗೂ ಜಪಾನ್ ನಲ್ಲಿ ಈ ಸೇವೆ ನೀಡಲಿರುವ ಜಿಯೋ ಮುಂದೆ ಇತರ ದೇಶಗಳಿಗೂ ವಿಸ್ತರಿಸುವ ಭರವಸೆ ನೀಡಿದೆ.

ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಅಂಕಿಅಂಶಗಳ ಪ್ರಕಾರ 4ಜಿ ನೆಟ್ ವರ್ಕ್ ಕಂಪನಿಗಳ ಪೈಕಿ ಜಿಯೋ ಮೊದಲ ಸ್ಥಾನದಲ್ಲಿದ್ದು, ತೀವ್ರ ಪೈಪೋಟಿ ನೀಡುತ್ತಿರುವ ಏರ್ ಟೆಲ್ ಎರಡನೇ ಸ್ಥಾನದಲ್ಲಿದೆ. ಇದೇ ವೇಳೆ ಬಳಕೆದಾರರ ಸಂಖ್ಯೆಗೆ ಅನುಗುಣವಾಗಿ ಜಿಯೋ ವಿಶ್ವಮಟ್ಟದಲ್ಲಿ 9ನೇ ಸ್ಥಾನದಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...