alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಸಿಮ್ ಕೊಳ್ಳುವ ಮುನ್ನ ನಿಮಗಿದು ತಿಳಿದಿರಲಿ

before jio

ಗ್ರಾಹಕರಿಗ ಬಂಪರ್ ಕೊಡುಗೆ ನೀಡಿದ ರಿಲಯೆನ್ಸ್ ಜಿಯೋ ಈಗಾಗ್ಲೇ ಭಾರತದ ಎಲ್ಲಾ ಕಡೆ ಮನೆಮಾತಾಗಿದೆ. ನಿನ್ನೆಯಿಂದ್ಲೇ ಜಿಯೋ ಸೇವೆ ಕಾರ್ಯಾರಂಭ ಮಾಡಿದ್ದು, ಗ್ರಾಹಕರು ಉಚಿತ ಹಾಗೂ ರೋಮಿಂಗ್ ರಹಿತ ಕರೆಗಳ ಲಾಭ ಪಡೆದುಕೊಳ್ತಿದ್ದಾರೆ. ಆದ್ರೆ ಜಿಯೋ ನೆಟ್ ವರ್ಕ್ ಗೆ ನೀವು ಬದಲಾಯಿಸಿಕೊಳ್ಳುವ ಮುನ್ನ ಕೆಲವು ವಿಷಯಗಳನ್ನು ನೀವು ತಿಳಿದಿರಲೇಬೇಕು.

1) ಜಿಯೋ ಸೇವೆಯನ್ನು ಮೊದಲ ಬಾರಿ ಬಳಸುತ್ತಿರುವವರಿಗೆ ವಾಯ್ಸ್ ಕಾಲ್ ಗಳು ಉಚಿತ. ವಿಡಿಯೋ ಕರೆಗಳ ದರವನ್ನು ನೀವು ಖರೀದಿಸಿರುವ ಡೇಟಾ ಪ್ಯಾಕ್ ನಲ್ಲಿ ಕಡಿತ ಮಾಡಲಾಗುತ್ತದೆ.

2) ರಾತ್ರಿ ವೇಳೆ ಜಿಯೋ ವೈಫೈ ಡೇಟಾ ಉಚಿತ. ಆದ್ರೆ ಅನ್ ಲಿಮಿಟೆಡ್ ಪ್ಲಾನ್ ಅಪ್ಲೈ ಆಗೋದು ತಡರಾತ್ರಿ 2 ರಿಂದ ಬೆಳಗ್ಗೆ 5 ಗಂಟೆವರೆಗೆ ಮಾತ್ರ.

3) ಜಿಯೋ ಆ್ಯಪ್ ಗಾಗಿ ನೀವು ಚಂದಾದಾರರಾಗಬೇಕು. ಡಿಸೆಂಬರ್ 31ರವರೆಗೆ ಇದು ಸಂಪೂರ್ಣ ಉಚಿತ. ಆದ್ರೆ ನಿಮ್ಮ ಡೇಟಾ ಪ್ಯಾಕ್ ಮೂಲಕವೇ ನೀವು ಡೇಟಾ ಬಳಸಬೇಕು. ಈ ಆ್ಯಪ್ ಗಳು ಜಿಯೋ ನೆಟ್ ವರ್ಕ್ ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತವೆ.

4) ಬಹುತೇಕ ಎಲ್ಲ ಪ್ರಿ ಪೇಯ್ಡ್ ಪ್ಲಾನ್ ಗಳಲ್ಲೂ ಪ್ರತಿದಿನ 100 ಎಸ್ ಎಂಎಸ್ ಉಚಿತ. 100 ಮೆಸೇಜ್ ಗಳ ನಂತರದ ದರದ ಬಗ್ಗೆ ಪ್ರಸ್ತಾಪ ಮಾಡಿಲ್ಲ.

5) 4 ಜಿ ಹಾಗೂ ವಾಯ್ಸ್ ಓವರ್ ಎಲ್ ಟಿ ಇ ಸಪೋರ್ಟ್ ಮಾಡುವ ಸ್ಮಾರ್ಟ್ ಫೋನ್ ನಿಮ್ಮ ಬಳಿ ಇರಬೇಕು. ಎಲ್ಲ 4 ಜಿ ಮೊಬೈಲ್ ಗಳಲ್ಲೂ ಜಿಯೋ ಸಿಮ್ ಕಾರ್ಡ್ ಬಳಸುವುದು ಅಸಾಧ್ಯ.

6) 4 ಜಿಬಿ ಡೇಟಾವನ್ನು ನೀವು ಬಳಸಿದ ನಂತರ ಪ್ರತಿ ಜಿಬಿಗೆ 250 ರೂಪಾಯಿಯಂತೆ ಚಾರ್ಜ್ ಮಾಡಲಾಗುತ್ತದೆ. ಪೋಸ್ಟ್ ಪೇಯ್ಡ್ ಪ್ಲಾನ್ ಗಳಲ್ಲಿ ಹೆಚ್ಚುವರಿ ಉಚಿತ ಡೇಟಾ ಸೌಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...