alex Certify
ಕನ್ನಡ ದುನಿಯಾ       Mobile App
       

Kannada Duniya

ರಿಲಾಯನ್ಸ್ ಜಿಯೋ ಶುರು ಮಾಡಿದೆ ಹೊಸ ಸೇವೆ

mukesh_ambani_jio22__2__1498149200_749x421

ರಿಲಾಯನ್ಸ್ ಜಿಯೋ ಮಾರುಕಟ್ಟೆಗೆ ಬರ್ತಾ ಇದ್ದಂತೆ ಟೆಲಿಕಾಂ ಕ್ಷೇತ್ರದಲ್ಲಿ ಅಲ್ಲೋಲ-ಕಲ್ಲೋಲವಾಗಿತ್ತು. ಆಗಿನಿಂದ ಈಗಿನವರೆಗೆ ಉಳಿದ ಟೆಲಿಕಾಂ ಕಂಪನಿಗಳು ಜಿಯೋಗಿಂತ ಬೆಸ್ಟ್ ಆಫರ್ ನೀಡಲು ಹೊಸ ಹೊಸ ಪ್ಲಾನ್ ಮಾಡ್ತಾ ಇವೆ. ಈ ಮಧ್ಯೆ ಜಿಯೋ ಮತ್ತೊಂದು ಹೊಸ ಆಫರ್ ಹೊತ್ತು ತಂದಿದೆ.

ರಿಲಾಯನ್ಸ್ ಜಿಯೋ 600 ನಗರಗಳಲ್ಲಿ ಜಿಯೋ ಸಿಮ್ ಹೋಮ್ ಡಿಲಿವರಿ ಶುರುಮಾಡಿದೆ. ಜಿಯೋ ಫೈ 4ಜಿ ಹಾಟ್ಸ್ಪಾಟ್ ಕೂಡ 90 ನಿಮಿಷಗಳಲ್ಲಿ ಗ್ರಾಹಕರ ಮನೆ ಸೇರಲಿದೆ. ರಿಲಾಯನ್ಸ್ ಜಿಯೋ ಸಿಮ್ ಹೋಂ ಡಿಲಿವರಿ ಪಡೆಯಲು ಗ್ರಾಹಕರು ಮೊದಲು ಜಿಯೋ ಕಂಪನಿಯ ಅಧಿಕೃತ ವೆಬ್ಸೈಟ್ ನಲ್ಲಿ ವಿನಂತಿ ಹಾಕಬೇಕು. ನಿಮ್ಮ ಪಿನ್ ಕೋಡ್ ಗೆ ಡಿಲಿವರಿ ಇದ್ಯಾ ಎಂಬುದನ್ನು ವೆಬ್ಸೈಟ್ ತೋರಿಸಲಿದೆ.

ಹೋಂ ಡಿಲಿವರಿಗೆ ಕಂಪನಿ ಯಾವುದೇ ಶುಲ್ಕವನ್ನು ವಸೂಲಿ ಮಾಡುವುದಿಲ್ಲ. ಗ್ರಾಹಕ ಮೊದಲು ಮೈ ಜಿಯೋ ಆ್ಯಪ್ ಡೌನ್ಲೋಡ್ ಮಾಡಿ ಅದ್ರಲ್ಲಿ ಕೂಪನ್ ಪಡೆದುಕೊಳ್ಳಬೇಕು. ನಂತ್ರ ಕಂಪನಿ ಕೇಳಿದ ಮಾಹಿತಿಯನ್ನು ನೀಡಬೇಕು. ಸಿಮ್ ನೀಡಲು ಆಧಾರ್ ನಂಬರ್ ಅಗತ್ಯವಿದೆ.

ಇನ್ನು ರಿಲಾಯನ್ಸ್ ಜಿಯೋಫೈ 4ಜಿ ಹಾಟ್ಸ್ಪಾಟ್ ಕೇವಲ 90 ನಿಮಿಷದಲ್ಲಿ ಮನೆಗೆ ಬರಲಿದೆ. ಹಳೆ ಡೋಂಗಲ್ ಮಿನಿಮಯಕ್ಕೂ ಅವಕಾಶವಿದೆ. ಹೀಗೆ ಮಾಡಿದಲ್ಲಿ ಗ್ರಾಹಕನಿಗೆ ಶೇಕಡಾ 100ರಷ್ಟು ಕ್ಯಾಶ್ಬ್ಯಾಕ್ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...