alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ 4ಜಿ ಫೀಚರ್ ಫೋನ್ ಗ್ರಾಹಕರಿಗೊಂದು ಖುಷಿ ಸುದ್ದಿ

ರಿಲಾಯನ್ಸ್ ಜಿಯೋ ಫ್ರೀ ಫೋನ್ ನ ಪ್ರಿ ಬುಕ್ಕಿಂಗ್ ಶೀಘ್ರದಲ್ಲಿಯೇ ಶುರುವಾಗಲಿದೆ. ಇದಕ್ಕಾಗಿ ಕಂಪನಿ ಎಲ್ಲ ತಯಾರಿ ನಡೆಸುತ್ತಿದೆ. ಮೊದಲ ಬಾರಿ ಪ್ರಿ ಬುಕ್ಕಿಂಗ್ ವೇಳೆ 60 ಲಕ್ಷಕ್ಕೂ ಹೆಚ್ಚು ಫೋನ್ ಬುಕ್ಕಿಂಗ್ ಆಗಿತ್ತು. ಆ ವೇಳೆ ಫೋನ್ ಕಾಯ್ದಿರಿಸಿ ಖರೀದಿ ಮಾಡಲು ಸಾಧ್ಯವಾಗದವರಿಗೆ ಕಂಪನಿ ಇಂಟರೆಸ್ಟ್ ರಿಜಿಸ್ಟ್ರೇಷನ್ ಗೆ ಅವಕಾಶ ನೀಡಿತ್ತು.

ಕಂಪನಿ ವೆಬ್ ಸೈಟ್ ನಲ್ಲಿ ಇಂಟರೆಸ್ಟ್ ರಿಜಿಸ್ಟ್ರೇಷನ್ ಈಗಲೂ ಇದೆ. ಇದ್ರಲ್ಲಿ ಆಸಕ್ತರು ತಮ್ಮ ಹೆಸರು ನೋಂದಾಯಿಸಬೇಕಾಗುತ್ತದೆ. ಈಗಾಗಲೇ ಹೆಸರು ನೋಂದಾಯಿಸಿದವರಿಗೆ ಕಂಪನಿ ಸಂದೇಶ ರವಾನೆ ಮಾಡಲಿದೆಯಂತೆ. ಈ ಸಂದೇಶದಲ್ಲಿ ಒಂದು ಲಿಂಕ್ ನೀಡಲಾಗಿದೆ. ಈ ಲಿಂಕ್ ಓಪನ್ ಮಾಡಿದ್ರೆ ಗ್ರಾಹಕರ ಕೋಡ್ ನಂಬರ್ ಇರಲಿದೆ. ಕೋಡ್ ನಂಬರನ್ನು ಸ್ಥಳೀಯ ರಿಲಾಯನ್ಸ್ ಜಿಯೋ ಮಳಿಗೆಯಲ್ಲಿ ತೋರಿಸಿದ್ರೆ ಜಿಯೋ ಫೋನ್ ನಿಮ್ಮ ಕೈ ಸೇರಲಿದೆ ಎಂದು ಮೂಲಗಳು ಹೇಳ್ತಿವೆ.

ಮೊದಲೇ ಹೇಳಿದಂತೆ ರಿಲಾಯನ್ಸ್ ಜಿಯೋ ಫೀಚರ್ ಫೋನನ್ನು ಉಚಿತವಾಗಿ ನೀಡ್ತಿದೆ. ಭದ್ರತೆಗಾಗಿ 1500 ರೂಪಾಯಿ ನೀಡಬೇಕಾಗುತ್ತದೆ. ಮೂರು ವರ್ಷಗಳ ನಂತ್ರ ಗ್ರಾಹಕ ಈ ಫೋನನ್ನು ವಾಪಸ್ ಮಾಡಬಹುದಾಗಿದೆ. ಈ ಫೋನ್ ಗೆ ಪ್ರತಿ ತಿಂಗಳು 153 ರೂಪಾಯಿ ರಿಚಾರ್ಜ್ ಮಾಡಿದಲ್ಲಿ ಮಾತ್ರ ಕಂಪನಿ ನೀಡುವ ಲಾಭವನ್ನು ನೀವು ಪಡೆಯಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...