alex Certify
ಕನ್ನಡ ದುನಿಯಾ       Mobile App
       

Kannada Duniya

ರಿಲಯನ್ಸ್ ಕಂಪನಿ ಗಳಿಸಿರುವ ಲಾಭವೆಷ್ಟು ಗೊತ್ತಾ…?

ರಿಲಯನ್ಸ್ ಕಂಪನಿ ತನ್ನ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಆರ್ಥಿಕ ವರ್ಷದ ಏಪ್ರಿಲ್ ನಿಂದ ಜೂನ್ ಅವಧಿಯಲ್ಲಿ ಸಂಸ್ಥೆ 9,459 ಕೋಟಿ ರೂಪಾಯಿ ನಿವ್ವಳ ಲಾಭ ದಾಖಲಿಸಿದೆ.

ಕಳೆದ ವರ್ಷಕ್ಕಿಂತಲೂ ರಿಲಯನ್ಸ್ ಕಂಪನಿ ಶೇಕಡಾ 12 ರಷ್ಟು ಹೆಚ್ಚು ಲಾಭ ಗಳಿಸಿದೆ. 2017-18 ರಲ್ಲಿ ಕಂಪನಿ ಇದೇ ಅವಧಿಯಲ್ಲಿ 8021 ಕೋಟಿ ಲಾಭ ಗಳಿಸಿದ್ರೆ, ಈ ಬಾರಿ 9,459 ಕೋಟಿ ರೂಪಾಯಿ ಲಾಭ ದಾಖಲಿಸಿದೆ. ಈ ಸಾಲಿನಲ್ಲಿ ರಿಲಯನ್ಸ್ ಕಂಪನಿ ಒಟ್ಟು ಶೇ. 56.5 ರಷ್ಟು ಆದಾಯದಲ್ಲಿ ಏರಿಕೆ ಕಂಡಿದೆ.

ಟೆಲಿಕಾಂ ವಲಯದಲ್ಲಿ ಜಿಯೋ ಚಂದಾದರರ ಸಂಖ್ಯೆ ಏರಿಕೆ ಆಗಿದ್ದು, ಚಿಲ್ಲರೆ ವ್ಯವಹಾರದ ಆದಾಯ ದ್ವಿಗುಣಗೊಂಡಿದೆ ಎಂದು ಕಂಪನಿ ತಿಳಿಸಿದೆ. ಜಿಯೋ ಕಳೆದ ಬಾರಿಗಿಂತಲೂ ಈ ಬಾರಿ ಶೇಕಡಾ 20 ರಷ್ಟು ಹೆಚ್ಚು ಲಾಭ ದಾಖಲಿಸಿದೆ. ಪರಿಣಾಮ ಜಿಯೋ 612 ಕೋಟಿ ರೂಪಾಯಿ ಲಾಭ ಗಳಿಸಿದೆ. ರಿಲಯನ್ಸ್ ಸಂಸ್ಥೆ ಪೆಟ್ರೋಕೆಮಿಕಲ್ ವ್ಯವಹಾರದಲ್ಲೂ ತನ್ನ ಛಾಪು ಮೂಡಿಸಿದ್ದು, ಈ ಉದ್ಯಮದಲ್ಲೂ ಲಾಭ ಗಳಿಕೆ ಚೇತೋಹಾರಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...