alex Certify
ಕನ್ನಡ ದುನಿಯಾ       Mobile App
       

Kannada Duniya

ಮುಕೇಶ್ ಅಂಬಾನಿ ಈಗ ವಿಶ್ವದ 11 ನೇ ಅತಿ ಸಿರಿವಂತ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಈಗ ವಿಶ್ವದಲ್ಲೇ 11 ನೇ ಅತಿ ಸಿರಿವಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ‌ ಮೌಲ್ಯ ಗಣನೀಯವಾಗಿ ಹೆಚ್ಚಳವಾಗಿರುವುದರಿಂದ ಅಂಬಾನಿ ಅವರ ಒಟ್ಟು ಸಂಪತ್ತಿನಲ್ಲೂ ಏರಿಕೆಯಾಗಿದೆ.

ಗುರುವಾರ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಷೇರು ಮೌಲ್ಯವು 1231 ರೂ.ಗೆ ಏರಿತು. ಇದು ರಿಫೈನರಿ-ಟು-ಟೆಲಿಕಾಂನ ಒಟ್ಟು ಮೌಲ್ಯವನ್ನು 7.80 ಲಕ್ಷ ಕೋಟಿ ರೂ.ಗೆ ಏರಿಸಿತು.

ಜುಲೈನ ವಾರ್ಷಿಕ ಷೇರುದಾರರ ಸಭೆಯಲ್ಲಿ, ರಿಲಯನ್ಸ್ ರೀಟೇಲ್ ಮತ್ತು ರಿಲಯನ್ಸ್ ಜಿಯೊ ವ್ಯವಹಾರ ದೊಡ್ಡ ಬೆಳವಣಿಗೆಯತ್ತ ಸಾಗಿದ್ದನ್ನು ಅಂಬಾನಿ ಉಲ್ಲೇಖಿಸಿದ್ದರು.

2025 ರ ವೇಳೆಗೆ ರಿಲಯನ್ಸ್ ಗಾತ್ರವು ಈಗಿನಕ್ಕಿಂತ ದ್ವಿಗುಣವಾಗಿರುತ್ತದೆ ಎಂದು ಸಭೆಯಲ್ಲಿ ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದರು. ಮುಕೇಶ್ ಅಂಬಾನಿ 3.40 ಲಕ್ಷ ಕೋಟಿ ರೂ. ಸಂಪತ್ತು ಹೊಂದಿದ್ದಾರೆಂದು ಮಾಧ್ಯಮಗಳ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಇಷ್ಟು ಮೊತ್ತದ ಗಳಿಕೆಯೊಂದಿಗೆ ಅವರು ವಿಶ್ವದ 11ನೇ ಅತಿ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...