alex Certify
ಕನ್ನಡ ದುನಿಯಾ       Mobile App
       

Kannada Duniya

ಶುರುವಾಗಿದೆ ರೆಡ್ ಮಿ ನೋಟ್ 5 ಮಾರಾಟ: ಸಿಗ್ತಿದೆ 2 ಸಾವಿರ ರೂ. ರಿಯಾಯಿತಿ

ಕ್ಸಿಯೋಮಿಯ ಪ್ರಸಿದ್ಧ ಸ್ಮಾರ್ಟ್ಫೋನ್ ರೆಡ್ ಮಿ ನೋಟ್ 5 ಪ್ರೊ ಆಗಸ್ಟ್ 8ರಂದು ಮತ್ತೆ ಮಾರಾಟಕ್ಕೆ ಲಭ್ಯವಾಗಿದೆ. ಗ್ರಾಹಕರು ಕಂಪನಿಯ ಅಧಿಕೃತ ವೆಬ್ಸೈಟ್ mi.com ನಿಂದ ಖರೀದಿ ಮಾಡಬಹುದಾಗಿದೆ. ಫೆಬ್ರವರಿ 14ರಂದು ಈ ಫೋನ್ ಬಿಡುಗಡೆ ಮಾಡಲಾಗಿದೆ. ಫೋನ್ ನಲ್ಲಿ 4000 mAh ಪವರ್ ಫುಲ್ ಬ್ಯಾಟರಿ ನೀಡಲಾಗಿದೆ. ಈ ಬ್ಯಾಟರಿ ಒಂದು ಇಡೀ ದಿನ ಬರಲಿದೆಯಂತೆ.

ಈ ಫೋನ್ ಖರೀದಿ ಮಾಡುವ ಗ್ರಾಹಕರಿಗೆ ಭರ್ಜರಿ ಆಫರ್ ಕೂಡ ಸಿಗ್ತಿದೆ. ಗ್ರಾಹಕರಿಗೆ ಜಿಯೋ 2,200 ರೂಪಾಯಿ ಕ್ಯಾಶ್ ಬ್ಯಾಕ್ ನೀಡ್ತಿದೆ. ಜೊತೆಗೆ 4.5 TB ಡೇಟಾ ಸಿಗಲಿದೆ. ಹಂಗಾಮಾ ಮ್ಯೂಸಿಕ್ ನ 3 ತಿಂಗಳ ಸದಸ್ಯತ್ವ ಸಿಗಲಿದೆ.

ರೆಡ್ ನೋಟ್ 5 ಪ್ರೊ 5.9 ಇಂಚಿನ ಎಚ್ಡಿ ಡಿಸ್ಪ್ಲೇ ಹೊಂದಿದೆ. ರಿಯರ್ ನಲ್ಲಿ 12 ಮೆಗಾಪಿಕ್ಸಲ್ ಮತ್ತು 5 ಮೆಗಾಪಿಕ್ಸಲ್ ಕ್ಯಾಮರಾ ಹೊಂದಿದೆ. ಈ ಸ್ಮಾರ್ಟ್ಫೋನ್ ನಲ್ಲಿ ಸೆಲ್ಫಿಗಾಗಿ 20 ಮೆಗಾಪಿಕ್ಸಲ್ ಕ್ಯಾಮರಾ ನೀಡಲಾಗಿದೆ. 6 ಜಿಬಿ ರ್ಯಾಮ್ ಹಾಗೂ 64 ಜಿಬಿ ಇಂಟರ್ನಲ್ ಸ್ಟೋರೇಜ್ ಫೋನ್ ಬೆಲೆ 16,999 ರೂಪಾಯಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...