alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಬಿಡುಗಡೆಯಾಯ್ತು ರೆಡ್ ಮಿ ನೋಟ್ 5

Xiaomi ಸಮಾರಂಭವೊಂದರಲ್ಲಿ ಪ್ರಸಿದ್ಧ ಜನಪ್ರಿಯ ಸ್ಮಾರ್ಟ್ಫೋನ್ ರೆಡ್ ಮಿ ನೋಟ್ 5 ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ 3ಜಿಬಿ/32ಜಿಬಿ ಮತ್ತು 4ಜಿಬಿ/64ಜಿಬಿ ರೂಪಾಂತರದಲ್ಲಿ ಗ್ರಾಹಕರಿಗೆ ಸಿಗಲಿದೆ. ಇದ್ರ ಬೆಲೆ 9,999 ರೂಪಾಯಿ ಹಾಗೂ 11,999 ರೂಪಾಯಿ.

ರೆಡ್ ಮಿ ನೋಟ್ 5ನಲ್ಲಿ 5.99 ಇಂಚಿನ ಫುಲ್ ಹೆಚ್ಡಿ ಪ್ಲಸ್ ಸ್ಕ್ರೀನ್ ನೀಡಲಾಗಿದೆ. 3ಜಿಬಿ ರ್ಯಾಮ್ ಜೊತೆ 32 ಜಿಬಿ ಮೆಮೋರಿ ಸಿಗಲಿದೆ. 4ಜಿಬಿ ರ್ಯಾಮ್ ಫೋನ್ ನಲ್ಲಿ 64 ಜಿಬಿ ಮೆಮೋರಿ ಲಭ್ಯವಾಗಲಿದೆ. ಕಾರ್ಡ್ ಮೂಲಕ ಇದನ್ನು ವಿಸ್ತರಿಸಬಹುದಾಗಿದೆ.

12 ಮೆಗಾಪಿಕ್ಸಲ್ ಕ್ಯಾಮರಾವನ್ನು ಅಳವಡಿಸಲಾಗಿದೆ. 5 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ ಇದ್ರಲ್ಲಿದೆ. ಮುಂಭಾಗದ ಕ್ಯಾಮರಾದಲ್ಲಿ ಪ್ರತಿ ಸೆಕೆಂಡಿಗೆ 30 ಫ್ರೇಮ್ ದರದಲ್ಲಿ ಫುಲ್ ಹೆಚ್ ಡಿ ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ. 4,000mAh ಬ್ಯಾಟರಿ ನೀಡಲಾಗಿದ್ದು, ಫುಲ್ ಚಾರ್ಜ್ ಆದಲ್ಲಿ 14 ಗಂಟೆ ಫೋನ್ ಬಳಸಬಹುದಾಗಿದೆ. 8 ಗಂಟೆಗಳ ಕಾಲ ಸತತವಾಗಿ ವಿಡಿಯೋ ಗೇಮ್ ಆಡಬಹುದೆಂದು ಕಂಪನಿ ಹೇಳಿದೆ. ರೆಡ್ ಮಿ ನೋಟ್ 4 ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್ಫೋನ್ ಆಗಿದೆ. ಈಗ ರೆಡ್ ಮಿ ನೋಟ್ 5 ಅಬ್ಬರ ಶುರುವಾಗಿದೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...