alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ರೆಡ್ ಮಿ5ಎ ಸ್ಮಾರ್ಟ್ಫೋನ್ ಸೇಲ್ ಶುರು

Xiaomi ರೆಡ್ ಮಿ 5ಎ ದೇಶದ ಸ್ಮಾರ್ಟ್ಫೋನ್ ಮಾರಾಟ ಭಾರತದಲ್ಲಿ ಇಂದಿನಿಂದ ಶುರುವಾಗಿದೆ. ಫ್ಲಿಪ್ಕಾರ್ಟ್ ನಲ್ಲಿ ಈ ಫೋನ್ ಗೆ ಸಾಕಷ್ಟು ಆಫರ್ ನೀಡಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ರೆಡ್ ಮಿ 5ಎ ಫೋನ್ ಗ್ರಾಹಕರು ಜಿಯೋ ಸಿಮ್ ಬಳಸಿದ್ರೆ ಸಾಕಷ್ಟು ಲಾಭ ಪಡೆಯಲಿದ್ದಾರೆ. ಜಿಯೋ 199 ರೂಪಾಯಿಗೆ ಅನಿಯಮಿತ ಕರೆ ಜೊತೆ ಅನಿಯಮಿತ ಡೇಟಾ ನೀಡ್ತಿದೆ. 12 ತಿಂಗಳು ಪೂರ್ತಿಯಾದ ನಂತ್ರ ಮೈ ಜಿಯೋದಲ್ಲಿ ಗ್ರಾಹಕರಿಗೆ 100 ರೂಪಾಯಿಯ 10 ವೋಚರ್ ಕ್ರೆಡಿಟ್ ಆಗಲಿದೆ. ಅಂದ್ರೆ ಜಿಯೋ ರೆಡ್ ಮಿ 5ಎ ಫೋನ್ ಗೆ 1000 ರೂಪಾಯಿ ರಿಯಾಯಿತಿ ನೀಡ್ತಿದೆ.

ಈ ಫೋನ್ ಗೆ ಫ್ಲಿಪ್ಕಾರ್ಟ್ ಇಎಂಐ ಸೌಲಭ್ಯವನ್ನೂ ಗ್ರಾಹಕರಿಗೆ ನೀಡ್ತಿದೆ. ಫ್ಲಿಪ್ಕಾರ್ಟ್ ಡಾಟ್ ಕಾಮ್ ಹಾಗೂ mi.com ನಲ್ಲಿ ಗ್ರಾಹಕರು ರೆಡ್ ಮಿ 5ಎ ಸ್ಮಾರ್ಟ್ಫೋನ್ ಖರೀದಿ ಮಾಡಬಹುದಾಗಿದೆ. 16ಜಿಬಿ ಇಂಟರ್ನಲ್ ಮೆಮೋರಿ ಹೊಂದಿರುವ ಈ ಫೋನ್ ಬೆಲೆ 4,999 ರೂಪಾಯಿ. 32ಜಿಬಿ ಇಂಟರ್ನಲ್ ಮೆಮೋರಿ ಹೊಂದಿರುವ ಫೋನ್ ಬೆಲೆ 6999 ರೂಪಾಯಿ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...