alex Certify
ಕನ್ನಡ ದುನಿಯಾ       Mobile App
       

Kannada Duniya

ಅಗ್ಗದ ಫೋನ್ Realme 2 ಮಾರಾಟ ಇಂದಿನಿಂದ ಶುರು

ಹೊಸ ಬ್ರ್ಯಾಂಡ್ Realme ಭಾರತದ ಮಾರುಕಟ್ಟೆಯಲ್ಲಿ ತನ್ನ Realme 2 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಇದು ತುಂಬಾ ಅಗ್ಗದ ಫೋನ್ ಆಗಿದೆ. Realme 2 ಫೋನ್ Realme 1 ನವೀಕೃತ ಆವೃತ್ತಿಯಾಗಿದೆ. Realme 2 ಸ್ಮಾರ್ಟ್ಫೋನ್ ಮೊದಲ ಸೇಲ್ ಇಂದು ಸೆಪ್ಟೆಂಬರ್ 4ರ ಮಧ್ಯಾಹ್ನ 12 ಗಂಟೆಗೆ ಶುರುವಾಗಲಿದೆ.

ಹೆಚ್.ಡಿ.ಎಫ್.ಸಿ. ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗ್ರಾಹಕರಿಗೆ ಈ ಫೋನ್ ಮೇಲೆ 750 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ. ಅಂದ್ರೆ Realme 2 ಮೊಬೈಲ್ ಫೋನ್ ಹೆಚ್.ಡಿ.ಎಫ್.ಸಿ. ಗ್ರಾಹಕರಿಗೆ 8,240 ರೂಪಾಯಿಗೆ ಸಿಗಲಿದೆ. ವಿನಿಮಯ ಗ್ರಾಹಕರು 500 ರೂಪಾಯಿ ಲಾಭ ಪಡೆಯಬಹುದಾಗಿದೆ.

ರಿಲಾಯನ್ಸ್ ಜಿಯೋ ಗ್ರಾಹಕರಿಗೂ Realme ಆಫರ್ ನೀಡ್ತಿದೆ. ಜಿಯೋ ಗ್ರಾಹಕರಿಗೆ 120 ಜಿಬಿ 4ಜಿ ಡೇಟಾ ಜೊತೆ 4200 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ. Realme 2 ಮೊಬೈಲ್ ಬೆಲೆ 8990 ರೂಪಾಯಿಯಿಂದ ಶುರುವಾಗುತ್ತದೆ. 3ಜಿಬಿ ರ್ಯಾಮ್ ಹಾಗೂ 32 ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ 8990 ರೂಪಾಯಿಯಾಗಿದೆ. 4ಜಿಬಿ ರ್ಯಾಮ್ ಹಾಗೂ 64 ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ 10,990 ರೂಪಾಯಿ. ಭಾರತದಲ್ಲಿ ಆನ್ಲೈನ್ ಶಾಪಿಂಗ್ ಸೈಟ್ ಫ್ಲಿಪ್ಕಾರ್ಟ್ ನಲ್ಲಿ ಮೊಬೈಲ್ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...