alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರಿಗೆ ಶಾಕ್ ನೀಡಿದ ಅನಿಲ್ ಅಂಬಾನಿ

ಅನಿಲ್ ಅಂಬಾನಿ ಟೆಲಿಕಾಂ ಕಂಪನಿ ರಿಲಯನ್ಸ್ ಕಮ್ಯುನಿಕೇಷನ್ (RCom) ಗ್ರಾಹಕರಿಗೆ ಶಾಕ್ ನೀಡಿದೆ. ಡಿಸೆಂಬರ್ 1ರಿಂದ ವಾಯ್ಸ್ ಕಾಲಿಂಗ್ ಬಂದ್ ಮಾಡಲು ನಿರ್ಧರಿಸಿದೆ. ಹಾಗಾಗಿ ರಿಲಯನ್ಸ್ ಕಮ್ಯುನಿಕೇಷನ್ ಗ್ರಾಹಕರು ಬೇರೆ ಟೆಲಿಕಾಂ ಕಂಪನಿಗೆ ಶಿಫ್ಟ್ ಆಗದೆ ಬೇರೆ ದಾರಿಯಿಲ್ಲ.

ಇನ್ಮುಂದೆ ರಿಲಯನ್ಸ್ ಕಮ್ಯುನಿಕೇಷನ್ ಗ್ರಾಹಕರಿಗೆ ಕೇವಲ 4ಜಿ ಡೇಟಾ ಸೇವೆಯನ್ನು ಮಾತ್ರ ನೀಡಲಿದೆ. RCom ಕಂಪನಿ ಸುಮಾರು 46 ಸಾವಿರ ಕೋಟಿ ಸಾಲ ಮಾಡಿದೆ. ಏರ್ಸೆಲ್ ಜೊತೆ ವೈರ್ಲೆಸ್ ಬ್ಯುಸಿನೆಸ್ ವಿಲೀನ ಮಾಡಿದ್ರೂ ಕಂಪನಿಗೆ ನಷ್ಟ ತುಂಬಲಾಗಲಿಲ್ಲ. ಹಾಗಾಗಿ ವಾಯ್ಸ್ ಕಾಲಿಂಗ್ ಸೇವೆ ಬಂದ್ ಮಾಡದೆ ಬೇರೆ ದಾರಿಯಿಲ್ಲ.

RCom ಆಂಧ್ರಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಉತ್ತರ ಪೂರ್ವ, ಪಶ್ಚಿಮ, ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ 2ಜಿ ಹಾಗೂ 4ಜಿ ಸೇವೆಗಳನ್ನು ನೀಡಲಿದೆ. RCom ಗ್ರಾಹಕರು ತಮ್ಮ ಸಂಖ್ಯೆಯನ್ನು ಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ. ಈ ಬಗ್ಗೆ ಕಂಪನಿ ಸಂದೇಶ ರವಾನೆ ಮಾಡ್ತಿದ್ದು, ಪೋರ್ಟ್ ಮಾಡಿಕೊಳ್ಳಲು ಸೂಚನೆ ನೀಡುತ್ತಿದೆ. ಡಿಸೆಂಬರ್ 31ರವರೆಗೆ ಗ್ರಾಹಕರಿಗೆ ಪೋರ್ಟ್ ಮಾಡಿಕೊಳ್ಳಲು ಕಂಪನಿ ಅವಕಾಶ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...