alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಾನಿ ಕಂಪನಿಯಿಂದ ಹೊರ ಬಿದ್ದಿದ್ದಾರೆ 48600 ಉದ್ಯೋಗಿಗಳು

ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಕಮ್ಯೂನಿಕೇಷನ್ ನಲ್ಲಿ 48600 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.ಸದ್ಯ ಕಂಪನಿಯಲ್ಲಿ ಕೇವಲ 3400 ಮಂದಿ ಕೆಲಸ ಮಾಡ್ತಿದ್ದಾರೆ. ರಿಲಾಯನ್ಸ್ ಕಮ್ಯೂನಿಕೇಷನ್ ನಲ್ಲಿ 52,000 ಉದ್ಯೋಗಿಗಳಿದ್ದರು. ವೈರ್ಲೆಸ್  ಆಪರೇಷನ್ ಬ್ಯೂಸಿನೆಸ್  ನಲ್ಲಾದ ಬದಲಾವಣೆ  ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಜಿಯೋ, ಏರ್ಟೆಲ್, ವೋಡಾಫೋನ್ ಸೇರಿದಂತೆ ಎಲ್ಲ ಟೆಲಿಕಾಂ ಕಂಪನಿಗಳ ಅಗ್ಗದ ಪ್ಲಾನ್ ವೈರ್ಲೆಸ್ ಸೆಕ್ಟರ್ ನಲ್ಲಿ ಬದಲಾವಣೆ ತಂದಿದೆ. ಟ್ರಾಯ್ ಬಿಡುಗಡೆ ಮಾಡಿರುವ ವರದಿಯೊಂದರ ಪ್ರಕಾರ, ವೈರ್ಲೆಸ್ ಬ್ಯೂಸಿನೆಸ್ ನಲ್ಲಿ ಬಾರಿ ಇಳಿಕೆ ಕಂಡು ಬರ್ತಿದೆ. ವಾರ್ಷಿಕವಾಗಿ ಕೇವಲ 26,000 ಕೋಟಿ ವ್ಯವಹಾರ ನಡೆಯುತ್ತಿದೆಯಂತೆ,.

ಒಂದು ಕಾಲದಲ್ಲಿ ರಿಲಾಯನ್ಸ್ ನಲ್ಲಿ 12 ಕೋಟಿ ಗ್ರಾಹಕರಿದ್ದರು. ಆದ್ರೀಗ ಕೇವಲ ಬೆರಳೆಣಿಕೆಯ ಗ್ರಾಹಕರಿದ್ದಾರೆ. ರಿಲಾಯನ್ಸ್ ಜಿಯೋ, ಏರ್ಟೆಲ್, ಐಡಿಯಾ, ವೋಡಾಫೋನ್ ಡೇಟಾ ಯುದ್ಧ ನಡೆಸುತ್ತಿದೆ. ಈ ಮೂಲಕ ಕಂಪನಿಗಳು ಲಾಭ ಮಾಡಿಕೊಳ್ತಿವೆ. ಆದ್ರೆ ಏರ್ಸೆಲ್, ರಿಲಾಯನ್ಸ್ ಕಮ್ಯೂನಿಕೇಷನ್ ಕಂಪನಿಗೆ ಇದ್ರಿಂದ ಹೊಡೆತ ಬಿದ್ದಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...