alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ನ್ಯೂಸ್: ಶೀಘ್ರವೇ ಮಾರುಕಟ್ಟೆಗೆ ಬರಲಿದೆ 100 ರೂಪಾಯಿಯ ಹೊಸ ನೋಟು

ಭಾರತೀಯ ರಿಸರ್ವ್ ಬ್ಯಾಂಕ್ 100 ರೂಪಾಯಿಯ ಹೊಸ ನೋಟುಗಳ ಮುದ್ರಣ ಶುರು ಮಾಡಿದೆ. ಹೊಸ ನೋಟು ಮಾರುಕಟ್ಟೆಗೆ ಬರ್ತಿದ್ದಂತೆ ಹಳೆ 100 ರೂಪಾಯಿ ನೋಟು ಮಾಯವಾಗಲಿದೆ. ಈಗಾಗಲೇ ಕೇಂದ್ರ ಸರ್ಕಾರ 10 ರೂಪಾಯಿ, 20 ರೂಪಾಯಿ, 50 ರೂಪಾಯಿ, 500 ರೂಪಾಯಿ ಹಾಗೂ 2 ಸಾವಿರ ರೂಪಾಯಿ ನೋಟುಗಳನ್ನು ಹೊಸ ರೂಪದಲ್ಲಿ ಮಾರುಕಟ್ಟೆಗೆ ತಂದಿದೆ.

ಈಗ ನೂರು ರೂಪಾಯಿ ನೋಟಿನ ಸರದಿ. ದೇವಾಸ್ ಬ್ಯಾಂಕ್ ನೋಟ್ ಪ್ರೆಸ್ ನಲ್ಲಿ ನೂರು ರೂಪಾಯಿ ನೋಟಿನ ಮುದ್ರಣ ಶುರುವಾಗಿದೆ. ಆಗಸ್ಟ್ ಕೊನೆಯೊಳಗೆ ಹೊಸ ನೋಟು ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಹೋಶಂಗಾಬಾದ್ ನ ಸೆಕ್ಯೂರಿಟಿ ಪೇಪರ್ ಮಿಲ್ ನ ಸ್ವದೇಶಿ ಪೇಪರ್ ನಲ್ಲಿ ನೋಟು ಮುದ್ರಣವಾಗ್ತಿದೆ. ನೋಟು ಬಣ್ಣ ಬಣ್ಣಗಳಿಂದ ಕೂಡಿರಲಿದೆ. ಹೊಸ ನೋಟಿನ ಬಗ್ಗೆ ಬಿಎನ್ಪಿ ಹೆಚ್ಚಿನ ಮಾಹಿತಿ ನೀಡಿಲ್ಲ. ನೂರು ರೂಪಾಯಿ ನೋಟಿನ ಜೊತೆ ಐದು ನೂರು ಹಾಗೂ ಎರಡು ಸಾವಿರ ರೂಪಾಯಿ ನೋಟುಗಳೂ ಮುದ್ರಣವಾಗ್ತಿವೆ.

ನವೆಂಬರ್ 8, 2016 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳನ್ನು ನಿಷೇದಿಸಿದ್ದರು. ಇದಾದ ನಂತ್ರ ಮಾರುಕಟ್ಟೆಗೆ 500, 2000 ರೂಪಾಯಿ ನೋಟುಗಳು ಬಂದಿದ್ದವು. ನಂತ್ರ ರಿಸರ್ವ್ ಬ್ಯಾಂಕ್ 10, 20, 50, 500 ಹಾಗೂ 2000 ರೂಪಾಯಿ ಹೊಸ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಟ್ಟಿತ್ತು. ಕಳೆದ ವರ್ಷ ಆಗಸ್ಟ್ ನಲ್ಲಿ 200 ರೂಪಾಯಿ ನೋಟು ಮಾರುಕಟ್ಟೆಗೆ ಬಂದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...