alex Certify
ಕನ್ನಡ ದುನಿಯಾ       Mobile App
       

Kannada Duniya

ನಿಧಾನಗತಿಯಲ್ಲಿ ಸಾಗಿದೆ ಹೊಸ ನೋಟುಗಳ ಮುದ್ರಣ ಪ್ರಕ್ರಿಯೆ

ಕಳೆದ ವರ್ಷದ ನವೆಂಬರ್ 8 ರಂದು 500 ಹಾಗೂ 1000 ರೂ. ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಅದಾದ ಬಳಿಕ ಹೊಸ 500 ಹಾಗೂ 2000 ರೂ. ನೋಟುಗಳನ್ನು ಚಲಾವಣೆಗೆ ತಂದಿದ್ದು, ಹೊಸ ನೋಟುಗಳ ಮುದ್ರಣವನ್ನು ಹಗಲು-ರಾತ್ರಿಯೆನ್ನದೆ ಮುದ್ರಿಸಿ ಚಲಾವಣೆಗೆ ಬಿಡಲಾಗಿತ್ತು.

ಇದರ ಮಧ್ಯೆ ಹಳೆ 500 ಹಾಗೂ 1000 ರೂ. ನೋಟುಗಳ ಬದಲಾವಣೆ ಪ್ರಕ್ರಿಯೆಯೂ ನಡೆದಿದ್ದು, ಬ್ಯಾಂಕ್ ಸಿಬ್ಬಂದಿಗಳೂ ಸಹ ವಿರಾಮವಿಲ್ಲದೆ ಸತತವಾಗಿ ಕಾರ್ಯ ನಿರ್ವಹಿಸಿದ್ದರು. ಈಗ ಹೊಸ 50 ರೂ. ಹಾಗೂ 200 ರೂ. ನೋಟುಗಳ ಮುದ್ರಣ ಆರಂಭಿಸಲಾಗಿದ್ದು, ಆದರೆ ರಿಸರ್ವ್ ಬ್ಯಾಂಕ್ ಹೊಸ ನೋಟುಗಳ ಮುದ್ರಣ ಪ್ರಕ್ರಿಯೆಯನ್ನು ನಿಧಾನಗೊಳಿಸಿದೆ ಎನ್ನಲಾಗಿದೆ.

ಇದಕ್ಕೆ ಸ್ಥಳಾವಕಾಶದ ಕೊರತೆಯೇ ಕಾರಣವೆನ್ನಲಾಗಿದ್ದು, ಈಗಾಗಲೇ ವಾಪಾಸ್ ಬಂದಿರುವ ಹಳೆ 500 ರೂ. ಹಾಗೂ 1000 ರೂ. ನೋಟುಗಳ ರಾಶಿಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕರೆನ್ಸಿ ಚೆಸ್ಟ್ ನಲ್ಲಿದೆ. ಇದರ ಎಣಿಕೆ ಕಾರ್ಯ ಇನ್ನೂ ನಡೆಯುತ್ತಿದೆ ಎನ್ನಲಾಗಿದ್ದು, ಅದು ಪೂರ್ಣಗೊಳ್ಳುವವರೆಗೆ ನಾಶ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮುದ್ರಣಗೊಂಡ ಹೊಸ ನೋಟುಗಳ ಸಂಗ್ರಹಕ್ಕೆ ಸ್ಥಳಾವಕಾಶದ ಕೊರತೆ ಎದುರಾಗಿರುವ ಕಾರಣ ಹೊಸ ನೋಟುಗಳ ಮುದ್ರಣ ಪ್ರಕ್ರಿಯೆಯನ್ನು ನಿಧಾನಗೊಳಿಸಲಾಗಿದೆ ಎನ್ನಲಾಗಿದೆ.

ಮಾಧ್ಯಮವೊಂದರ ವರದಿ ಪ್ರಕಾರ 2016-17 ನೇ ಸಾಲಿನ ಹಣಕಾಸು ವರ್ಷದಲ್ಲಿ 28 ಬಿಲಿಯನ್ ನೋಟುಗಳನ್ನು ಆರ್.ಬಿ.ಐ. ಮುದ್ರಿಸಿದ್ದು, 2017-18 ನೇ ಸಾಲಿನಲ್ಲಿ ಇದುವರೆಗೆ 21 ಬಿಲಿಯನ್ ನೋಟುಗಳನ್ನು ಮುದ್ರಿಸಲಾಗಿದೆ ಎನ್ನಲಾಗಿದೆ. ನೋಟು ಮುದ್ರಣದಲ್ಲಿ ಶೇ.33.33 ರಷ್ಟು ಇಳಿಕೆಯಾಗಿದೆ ಎಂದು ವರದಿಯಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...