alex Certify
ಕನ್ನಡ ದುನಿಯಾ       Mobile App
       

Kannada Duniya

10 ರೂ. ನಾಣ್ಯ ಕುರಿತ ಮೆಸೇಜ್ ನಿಮಗೆ ಬಂತಾ…?

‘10 ರೂ. ನಾಣ್ಯವು ರೂಪಾಯಿ ಚಿಹ್ನೆ ಸಹಿತ ಮತ್ತು ರಹಿತವಾಗಿ ಚಲಾವಣೆಯಲ್ಲಿವೆ. ಭಯಪಡದೇ ಅವುಗಳನ್ನು ಸ್ವೀಕರಿಸಿ. ಹೆಚ್ಚಿನ ಮಾಹಿತಿಗೆ 14440 ಗೆ ಮಿಸ್ಡ್ ಕಾಲ್ ಕೊಡಿ.’ ಇಂತಹುದೊಂದು ಮೆಸೇಜ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಕಳಿಸಲಾಗ್ತಿದೆ.

10 ರೂ. ನಾಣ್ಯದ ಕುರಿತಾಗಿ ಗ್ರಾಹಕರು, ವ್ಯಾಪಾರಿಗಳಲ್ಲಿ ಭಾರೀ ಗೊಂದಲ ಉಂಟಾದ ಹಿನ್ನಲೆಯಲ್ಲಿ ಹಲವು ಸಲ ಸ್ಪಷ್ಟನೆ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಸರ್ಕಾರ ಹಾಗೂ ವಿವಿಧ ಬ್ಯಾಂಕ್ ಗಳಿಂದ 10 ರೂ. ನಾಣ್ಯ ಚಲಾವಣೆಯಲ್ಲಿದೆ ಎಂದು ಅನೇಕ ಸಲ ಸ್ಪಷ್ಟನೆ ನೀಡಲಾಗಿದ್ದರೂ, ಜನರಲ್ಲಿ ಗೊಂದಲ ಬಗೆಹರಿದಿಲ್ಲ. ಈ ಕಾರಣದಿಂದ ಕನ್ನಡ, ಹಿಂದಿ, ಇಂಗ್ಲೀಷ್ ನಲ್ಲಿ ಮೆಸೇಜ್ ಕಳಿಸಲಾಗ್ತಿದೆ.

2010 ರಲ್ಲಿ 10 ರೂ. ಚಿಹ್ನೆಯೊಂದಿಗೆ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದೆ. ನಂತರದಲ್ಲಿ ಬಂದ 10 ರೂ. ನಾಣ್ಯಗಳ ಮೇಲೆ ಚಿಹ್ನೆ ಮುದ್ರಿಸದ ಕಾರಣ ಜನರಲ್ಲಿ ಗೊಂದಲವಾಗಿದೆ. ಅನೇಕ ಬಾರಿ ಸ್ಪಷ್ಟನೆ ನೀಡಿದರೂ, ಗೊಂದಲ ಬಗೆಹರಿಯದ ಕಾರಣ, ಮೆಸೇಜ್ ಕಳಿಸಲಾಗ್ತಿದೆ. ಚಿಹ್ನೆ ಸಹಿತ ಮತ್ತು ರಹಿತವಾಗಿ 10 ರೂ. ನಾಣ್ಯ ಚಲಾವಣೆಯಲ್ಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...