alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ…! 50,100ರ ನೋಟ್ ಪಡೆಯುವ ಮುನ್ನ ಒಮ್ಮೆ ಚೆಕ್ ಮಾಡಿ

ಎರಡು ಸಾವಿರ ಅಥವಾ 500 ರೂಪಾಯಿ ನೋಟು ಪಡೆಯುವ ಮೊದಲು ನೋಟು ನಕಲಿಯಾ ಇಲ್ಲ ಅಸಲಿಯಾ ಎಂಬುದನ್ನು ಪರೀಕ್ಷೆ ಮಾಡ್ತೇವೆ. ಆದ್ರೆ 50, 100 ರೂಪಾಯಿ ಪಡೆಯುವ ವೇಳೆ ಈ ಬಗ್ಗೆ ಗಮನ ನೀಡೋದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು 50 ಹಾಗೂ 100 ರೂಪಾಯಿಯ ನಕಲಿ ನೋಟನ್ನು ಭಾರೀ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಈ ವಿಷ್ಯವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.

ರಿಸರ್ವ್ ಬ್ಯಾಂಕ್ ವರದಿ ಪ್ರಕಾರ, ಹಿಂದಿನ ವರ್ಷ 5,22,783 ನಕಲಿ ನೋಟು ಸಿಕ್ಕಿದೆಯಂತೆ. ಅದ್ರಲ್ಲಿ ಶೇಕಡಾ 63.9 ರಷ್ಟು ನೋಟು ಬ್ಯಾಂಕ್ ಗೆ ಬಂದಿತ್ತಂತೆ. 2017-2018 ರಲ್ಲಿ ನಕಲಿ 100 ರೂಪಾಯಿ ನೋಟಿನಲ್ಲಿ ಶೇಕಡಾ 35 ರಷ್ಟು ಹೆಚ್ಚಳವಾಗಿದೆಯಂತೆ. ಹಿಂದಿನ ವರ್ಷಕ್ಕೆ ಹೋಲಿಸಿದ್ರೆ 50 ರೂಪಾಯಿ ನಕಲಿ ನೋಟಿನಲ್ಲಿ ಶೇಕಡಾ 154.3 ರಷ್ಟು ಹೆಚ್ಚಳವಾಗಿದೆಯಂತೆ.

2016-2017 ರಲ್ಲಿ ನಕಲಿ 50 ರೂಪಾಯಿ ನೋಟಿನ ಸಂಖ್ಯೆ 9,222 ರೂಪಾಯಿಯಿತ್ತು. 2017-2018 ರಲ್ಲಿ ಇದ್ರ ಸಂಖ್ಯೆ 23,447 ಆಗಿದೆ. 100 ರೂಪಾಯಿ ನಕಲಿ ನೋಟಿನ ಸಂಖ್ಯೆ 2016 ರಲ್ಲಿ 1,77,195 ಇಷ್ಟಿತ್ತು. ಈಗ 239,182 ರೂಪಾಯಿಯಾಗಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...