alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್.ಬಿ.ಐ. ಬಡ್ಡಿ ದರ ಬದಲಾವಣೆ ಇಲ್ಲ

raghuram-rajan-rbi 79

ಮುಂಬೈ: ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಆರ್.ಬಿ.ಐ. ಬಡ್ಡಿ ದರವನ್ನು ಬದಲಿಸದಿರಲು ತೀರ್ಮಾನ ಕೈಗೊಳ್ಳಲಾಗಿದೆ. ಸೆಪ್ಟಂಬರ್ 3 ರಂದು ಆರ್.ಬಿ.ಐ. ಗವರ್ನರ್ ರಘುರಾಮ್ ರಾಜನ್ ಅವರ ಅಧಿಕಾರದ ಅವಧಿ ಕೊನೆಗೊಳ್ಳಲಿದೆ.

ತಮ್ಮ ಅಧಿಕಾರದ ಅವಧಿಯ ಕೊನೆಯ ಹಣಕಾಸು ನೀತಿ ಪರಾಮರ್ಶೆಯನ್ನು ಪ್ರಕಟಿಸಿರುವ ರಘುರಾಮ್ ರಾಜನ್, ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಿದ್ದಾರೆ. ಕಳೆದ 2 ವರ್ಷಗಳಲ್ಲಿಯೇ ಹಣದುಬ್ಬರ ಪ್ರಮಾಣ ಗರಿಷ್ಠ ಮಟ್ಟದಲ್ಲಿದೆ. ಅಲ್ಲದೇ, ಹಣದುಬ್ಬರ ಇನ್ನೂ ಏರಿಕೆಯಾಗುವ ಅಪಾಯ ಕೂಡ ಇದೆ ಎನ್ನಲಾಗಿದೆ. ಇದರೊಂದಿಗೆ ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಯಾಗುವುದರಿಂದ ಹಣದುಬ್ಬರ ಹೆಚ್ಚಾಗುವ ಸಾಧ್ಯತೆ ಇದೆ.

ರಘುರಾಮ್ ರಾಜನ್ ಅವರ 3 ವರ್ಷಗಳ ಅಧಿಕಾರದ ಅವಧಿ ಸೆಪ್ಟಂಬರ್ 3ರಂದು ಕೊನೆಯಾಗಲಿದ್ದು, 2017 ಮಾರ್ಚ್ ವೇಳೆಗೆ ಶೇ.5 ರಷ್ಟು ಆಸುಪಾಸಿನಲ್ಲಿ ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ಆರ್.ಬಿ.ಐ. ಬಡ್ಡಿದರವನ್ನು ಬದಲಿಸದಿರಲು ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...