alex Certify
ಕನ್ನಡ ದುನಿಯಾ       Mobile App
       

Kannada Duniya

200 ದೊಡ್ಡ ಖಾತೆಗಳ ಮೇಲೆ ಆರ್.ಬಿ.ಐ. ಹದ್ದಿನ ಕಣ್ಣು

ನವದೆಹಲಿ: ಇತ್ತೀಚೆಗೆ ಸದ್ದು ಮಾಡುತ್ತಿರುವ ಅನುತ್ಪಾದಕ ಸಾಲ ಖಾತೆಗಳ ವಿಷಯದಿಂದ ಎಚ್ಚೆತ್ತ ರಿಸರ್ವ್ ಬ್ಯಾಂಕ್, ದೇಶದ 200 ಪ್ರಮುಖ ದೊಡ್ಡ ಬ್ಯಾಂಕ್ ಖಾತೆಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಪ್ರಮುಖ ಉದ್ಯಮಿಗಳು ಸಾಲ ಪಡೆದು ತೀರಿಸದೇ ಬ್ಯಾಂಕುಗಳ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಬೆನ್ನ ಹಿಂದೆಯೇ ಆರ್.ಬಿ.ಐ. ಇಂಥದ್ದೊಂದು ಕ್ರಮಕ್ಕೆ ಮುಂದಾಗಿದೆ. ಸಾಮಾನ್ಯವಾಗಿ ಆರ್ಥಿಕ ವರ್ಷದ ಕೊನೆಯಲ್ಲಿ ಖಾತೆಗಳ ಬಗ್ಗೆ ನಿಗಾ ನೋಡುವುದು ಸಾಮಾನ್ಯ ಸಂಗತಿ. ಆದರೆ ಎನ್.ಪಿ.ಎ. ಪ್ರಕರಣ ಹೆಚ್ಚುತ್ತಿರುವ ಕಾರಣ ಆರ್ಥಿಕ ಶಿಸ್ತು ತರಲು ಆರ್.ಬಿ.ಐ. ವಿಶೇಷ ಕ್ರಮಕ್ಕೆ ಮುಂದಾಗಿದೆ.

ಸಾಲ ನೀಡುವಾಗ ಬ್ಯಾಂಕುಗಳು ಸರಿಯಾದ ನಿಯಮ ಪಾಲನೆ ಮಾಡಿವೆಯೇ ಎಂಬುದನ್ನು ಆರ್.ಬಿ.ಐ. ಖಚಿತಪಡಿಸಿಕೊಳ್ಳಲು ಆರಂಭಿಸಿದೆ. ಈ ಪಟ್ಟಿಯಲ್ಲಿ ಪ್ರಮುಖ ಉದ್ದಿಮೆಗಳು ಹಾಗೂ ಉದ್ಯಮದಾರರ ಖಾತೆಯೂ ಸೇರಿದೆ ಎಂಬುದು ವಿಶೇಷ.

ಕಳೆದ ಆರ್ಥಿಕ ವರ್ಷದಲ್ಲಿ ವಿವಿಧ ಖಾಸಗಿ ಬ್ಯಾಂಕುಗಳು ನಿಯಮಗಳನ್ನು ಮೀರಿ ಸಾಲ ನೀಡಿ, ಎನ್.ಪಿ.ಎ. ಬಗ್ಗೆ ಸರಿಯಾದ ಮಾಹಿತಿ ನೀಡದೇ ಸಿಕ್ಕಿಬಿದ್ದಿದ್ದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...