alex Certify
ಕನ್ನಡ ದುನಿಯಾ       Mobile App
       

Kannada Duniya

9 ವರ್ಷಗಳ ನಂತ್ರ ಆರ್. ಬಿ. ಐ. ಖರೀದಿ ಮಾಡಿದ ಬಂಗಾರದ ಮೌಲ್ಯವೆಷ್ಟು ಗೊತ್ತಾ?

ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತ ವರ್ಷ 2017-2018ರಲ್ಲಿ 8.46 ಟನ್ ಬಂಗಾರವನ್ನು ಖರೀದಿ ಮಾಡಿದೆ. ಒಂಭತ್ತು ವರ್ಷಗಳ ನಂತ್ರ ಆರ್. ಬಿ. ಐ. ಬಂಗಾರ ಖರೀದಿ ಮಾಡಿದೆ. ಆರ್. ಬಿ. ಐ. 2017-2018 ರ ವಾರ್ಷಿಕ ವರದಿಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.

ವಾರ್ಷಿಕ ವರದಿ ಪ್ರಕಾರ ಆರ್. ಬಿ. ಐ. ಬಳಿ ಜೂನ್ 30, 2018 ರವರೆಗೆ 566.23 ಟನ್ ಬಂಗಾರವಿದೆಯಂತೆ. ಜೂನ್ 30, 2017 ರಲ್ಲಿ 557.77 ಟನ್ ಬಂಗಾರವಿತ್ತು. ಒಂದು ವರ್ಷದಲ್ಲಿ 8.46 ಟನ್ ಬಂಗಾರ ಹೆಚ್ಚಾಗಿದೆ. 2009 ರಲ್ಲಿ ಆರ್. ಬಿ. ಐ. ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ 200 ಟನ್ ಬಂಗಾರವನ್ನು ಖರೀದಿ ಮಾಡಿತ್ತು.

ಆರ್. ಬಿ. ಐ. ಬಳಿಯಿರುವ 566.23 ಟನ್ ಬಂಗಾರದಲ್ಲಿ 292.30 ಟನ್ ಬಂಗಾರ ನೋಟು ಮುದ್ರಣ ವಿಭಾಗಕ್ಕೆ ಸೇರಿದೆ. 273.93 ಟನ್ ಬಂಗಾರ ಬ್ಯಾಂಕಿನ ಸಂಪತ್ತಾಗಿದೆ. ಬ್ಯಾಂಕಿಂಗ್ ವಿಭಾಗದ ಬಂಗಾರದ ಒಟ್ಟು ಮೌಲ್ಯ 2018 ರಲ್ಲಿ ಶೇಕಡಾ 11.12ರಷ್ಟು ಏರಿಕೆ ಕಂಡಿದೆ. 2017 ರಲ್ಲಿ 62,702 ಕೋಟಿ ರೂಪಾಯಿಯಿದ್ದ ಬಂಗಾರದ ಮೌಲ್ಯ ಈಗ 69,674 ಕೋಟಿ ರೂಪಾಯಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...