alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಜಿಟಲ್ ವಹಿವಾಟುದಾರರಿಗೆ ‘ಸಿಹಿ ಸುದ್ದಿ’ ನೀಡಲು ಮುಂದಾದ ಆರ್.ಬಿ.ಐ.

ದೇಶದಲ್ಲಿ ನಗದು ರಹಿತ ಅರ್ಥ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಇದೀಗ ಡಿಜಿಟಲ್ ಟ್ರಾನ್ಸಾಕ್ಷನ್ ಗಳಲ್ಲಿ ಗ್ರಾಹಕ ಸ್ನೇಹಿ ಬದಲಾವಣೆಗಳನ್ನು ತರಲು ಚಿಂತನೆ ನಡೆಸಿದೆ.

ಡಿಜಿಟಲ್ ವಹಿವಾಟಿನಲ್ಲಿ ಜನರಿಗೆ ನಂಬಿಕೆ ಹೆಚ್ಚಾದಾಗ ನಗದು ವ್ಯವಹಾರ ಕಡಿಮೆಯಾಗುವುದರೊಂದಿಗೆ ದೇಶವು ನಗದಿನ ಅವಲಂಬನೆ ಕಡಿಮೆಯಾಗುವುದು, ಜೊತೆಗೆ ಇದು ದೇಶದ ಅರ್ಥ ವ್ಯವಸ್ಥೆಯ ಅಭಿವೃದ್ಧಿಗೂ ಕಾರಣವಾಗುವುದು ಎಂಬ ಕೇಂದ್ರ ಸರ್ಕಾರದ ಆಲೋಚನೆಗೆ ಇಂಬು ನೀಡುವ ಸಲುವಾಗಿ ಈ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸೆಂಟ್ರಲ್ ಬ್ಯಾಂಕ್ ನ ಉಪ ಗವರ್ನರ್ ಎಂ.ಕೆ. ಜೈನ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಆನ್ ಲೈನ್ ಪೇಮೆಂಟ್ ಅಥವಾ ಇನ್ನಿತರ ಯಾವುದೇ ಡಿಜಿಟಲ್ ವಿನಿಮಯಗಳ ವೇಳೆ ವಂಚನೆಯಾದಾಗ ಅಥವಾ ತಾಂತ್ರಿಕ ತೊಂದರೆಯುಂಟಾದಾಗ ದೂರು ನೀಡಿದಲ್ಲಿ ಗ್ರಾಹಕರ ಹೊಣೆಗಾರಿಕೆಯನ್ನು ಕಡಿಮೆಗೊಳಿಸುವ ಬಗ್ಗೆ ಆರ್.ಬಿ.ಐ. ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಈಗಾಗಲೇ ಘೋಷಿಸಿದೆ.

ಹೀಗಾಗಿ ಗ್ರಾಹಕರಲ್ಲಿ ನಂಬಿಕೆ ಮೂಡಿಸಿ ಡಿಜಿಟಲ್ ವಹಿವಾಟಿಗೆ ಮುಂದಿನ ದಿನಗಳಲ್ಲಿ ಒತ್ತು ನೀಡುವುದು ಆರ್.ಬಿ.ಐ.ನ ಆಲೋಚನೆಯಾಗಿದೆ. ಏನೇ ಸಮಸ್ಯೆಗಳಾದರೂ ಗ್ರಾಹಕರು ಮೊದಲು ಅದನ್ನು ಬ್ಯಾಂಕಿನ ಗಮನಕ್ಕೆ ತರಬೇಕು. ಈ ಬಗ್ಗೆ ಸೆಂಟ್ರಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ಡಿಸೆಂಬರ್ ಒಳಗಾಗಿ ಸಂಪೂರ್ಣ ಮಾಹಿತಿ ನೀಡಲಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...