alex Certify
ಕನ್ನಡ ದುನಿಯಾ       Mobile App
       

Kannada Duniya

ಬದಲಾಗದ ರೆಪೋ ದರ-ಮನೆ ಸಾಲ ಇನ್ನೂ ಅಗ್ಗ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು(ರೆಪೋ ದರ) ಬದಲಿಸದೇ ಯಥಾಸ್ಥಿತಿಯಲ್ಲಿ ಮುಂದುವರೆಸಿದೆ. ರೆಪೋ ದರ ಶೇ. 6 ರಲ್ಲಿಯೇ ಮುಂದುವರೆದಿದ್ದು, ಮನೆ ಸಾಲಗಳು ಸ್ವಲ್ಪ ಮಟ್ಟಿಗೆ ಅಗ್ಗವಾಗಬಹುದು.

ಆರ್.ಬಿ.ಐ. ಬಡ್ಡಿದರ ಕಡಿಮೆ ಮಾಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಹಣದುಬ್ಬರ ಏರುಮುಖದಲ್ಲಿದ್ದು, ರಿವರ್ಸ್ ರೆಪೋ ದರ ಶೇ. 5.75 ರಷ್ಟಿದ್ದು, ಯಥಾಸ್ಥಿತಿ ಜಾರಿಯಲ್ಲಿದೆ.

ಹಣದುಬ್ಬರ ಆಗಸ್ಟ್ ನಲ್ಲಿ ಶೇ. 3.36 ರಷ್ಟಿದ್ದು, ಮುಂದಿನ 6 ತಿಂಗಳಲ್ಲಿ ಶೇ. 4.2 ರಿಂದ ಶೇ. 4.6 ರಷ್ಟು ತಲುಪಬಹುದೆಂದು ಅಂದಾಜಿಸಲಾಗಿದೆ.

ಮುಂಬೈನಲ್ಲಿ ಆರ್.ಬಿ.ಐ. ಗವರ್ನರ್ ಊರ್ಜಿತ್ ಪಟೇಲ್ ನೇತೃತ್ವದಲ್ಲಿ ಆರ್.ಬಿ.ಐ. ಆರ್ಥಿಕ ಪರಾಮರ್ಶೆ ಸಭೆ ನಡೆದಿದ್ದು, ಹಿಂದೆ ಅಂದಾಜಿಸಿದ್ದ ಶೇ. 7.3 ರ ಆರ್ಥಿಕ ಬೆಳವಣಿಗೆ ದರವನ್ನು ಶೇ. 6.7 ಕ್ಕೆ ಇಳಿಸಲಾಗಿದೆ.

ಕೆಲವು ಬ್ಯಾಂಕುಗಳು ಇನ್ನೂ ತಮ್ಮ ಸಾಲ ದರಗಳು ಕಡಿಮೆ ಮಾಡಬಹುದು ಎಂದು ಹೇಳಿವೆ. ಈಗ ಗೃಹ ಸಾಲಗಳು ಹೆಚ್ಚು ಪಡೆಯುವವರು ಇಲ್ಲ ಎಂದು ತಿಳಿಸಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ- ಅಂಶಗಳ ಪ್ರಕಾರ ಮನೆ ಸಾಲಗಳ ಬೆಳವಣಿಗೆ ದರವು ಕಡಿಮೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...