alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್ ಬಿ ಐ ನಿರ್ಧಾರದಿಂದ ಬ್ಯಾಂಕ್ ಸಾಲಗಾರರ ಜೇಬಿಗೆ ಬೀಳಲಿದೆ ಕತ್ತರಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿ ಬಡ್ಡಿ ದರ ಏರಿಕೆ ನಿರ್ಧಾರ ಕೈಗೊಂಡಿದೆ. ರೆಪೋ ದರದಲ್ಲಿ ಏರಿಕೆ ಮಾಡಿದೆ. ರೆಪೋ ದರ ಶೇಕಡಾ 0.25 ರಷ್ಟು ಏರಿಕೆಯಾಗಿದೆ. ರೆಪೋ ದರ ಈಗ ಶೇಕಡಾ 6.25 ರ ಬದಲು ಶೇಕಡಾ 6.50 ಕ್ಕೆ ಬಂದು ನಿಂತಿದೆ. ರಿಸರ್ವ್ ರೆಪೋ ದರ ಶೇಕಡಾ 6 ರ ಬದಲು ಶೇಕಡಾ 6.25 ಆಗಿದೆ.

ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಏರಿಕೆಯಾಗಿರುವುದು ಮನೆ ಹಾಗೂ ವಾಹನ ಸಾಲಗಾರರ ಜೇಬಿಗೆ ಕತ್ತರಿ ಬೀಳಲಿದೆ. ವಾಹನ ಹಾಗೂ ಮನೆ ಸಾಲದ ಇಎಂಐ ಹೆಚ್ಚಾಗುವ ಸಾಧ್ಯತೆಯಿದೆ. ಜೂನ್ ನಲ್ಲಿ ಆರ್ ಬಿ ಐ ರೆಪೋ ದರದಲ್ಲಿ ಏರಿಕೆ ಮಾಡಿತ್ತು. ರೆಪೋ ದರ ಶೇಕಡಾ 0.25 ರಷ್ಟು ಏರಿಕೆಯಾಗಿತ್ತು. ಎಂಎಸ್ಎಫ್ ದರ ಹಾಗೂ ಬ್ಯಾಂಕ್ ದರ  ಶೇಕಡಾ 6.75 ಆಗಿದೆ.

ಆರ್ ಬಿಐ ಬ್ಯಾಂಕ್ ಗಳಿಗೆ ನೀಡುವ ಬಡ್ಡಿ ದರವನ್ನು ರೆಪೋ ಎಂದು ಕರೆಯಲಾಗುತ್ತದೆ. ಹಣಕಾಸಿನ ವಹಿವಾಟಿನಲ್ಲಿ ಇದು ಮುಖ್ಯ ಪಾತ್ರವಹಿಸುತ್ತದೆ. ರೆಪೋ ದರದಲ್ಲಿ ಏರಿಕೆ-ಇಳಿಕೆಯಾದಂತೆ ಬ್ಯಾಂಕ್ ಸಾಲದ ಮೇಲಿನ ಬಡ್ಡಿಯಲ್ಲಿ ಬದಲಾವಣೆಯಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...