alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್ ಬಿ ಐ ರೆಪೋ ದರದಲ್ಲಿ ಏರಿಕೆ: ಜೇಬು ಸುಡಲಿದೆ ಬ್ಯಾಂಕ್ ಸಾಲ

ಮೂರು ದಿನಗಳ ಕಾಲ ಚರ್ಚೆ ನಡೆಸಿ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಘೋಷಣೆ ಮಾಡಿದೆ. ಬುಧವಾರ ಆರ್ ಬಿ ಐ ರೆಪೋ ದರದಲ್ಲಿ ಏರಿಕೆ ಮಾಡಿದೆ. ವಿತ್ತೀಯ ನೀತಿ ಸಮಿತಿ ರೆಪೋ ದರವನ್ನು ಶೇಕಡಾ 6 ರಿಂದ ಶೇಕಡಾ 6.25 ಕ್ಕೆ ಏರಿಕೆ ಮಾಡಿದೆ.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿ ರೆಪೋ ದರ ಏರಿಕೆಯಾಗಿದೆ. ರಿಸರ್ವ್ ಬ್ಯಾಂಕ್ ರೆಪೋ ದರ ಏರಿಕೆ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳಲಿದೆ. ಸಾಮಾನ್ಯ ಜನರಿಗೆ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದುಬಾರಿಯಾಗಲಿದೆ. ಇದ್ರ ಜೊತೆಗೆ ಇಎಂಐ ಬಡ್ಡಿ ದರದಲ್ಲಿ ಏರಿಕೆ ಕಾಣುವ ಸಾಧ್ಯತೆಯಿದೆ.

ರೆಪೋ ದರದ ಜೊತೆ ರಿಸರ್ವ್ ಬ್ಯಾಂಕ್ ರಿಸರ್ವ್ ರೆಪೋ ದರವನ್ನು ಶೇಕಡಾ 6ಕ್ಕೇರಿಸಿದೆ. ರೆಪೋ ದರ ಏರಿಕೆಗೆ ವಿತ್ತೀಯ ನೀತಿ ಸಮಿತಿ ಸದಸ್ಯರು ಮತ ಚಲಾಯಿಸಿದ್ದರು. ಈ ಬಾರಿಯೂ ರೆಪೋ ದರದಲ್ಲಿ ಏರಿಕೆಯಾಗುವುದಿಲ್ಲವೆಂದು ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಆಗಸ್ಟ್ ವರೆಗೆ ರೆಪೋ ದರ ಏರಿಕೆ ಮುಂದೂಡುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿತ್ತು.

ಸದ್ಯದ ಹಾಗೂ ಭವಿಷ್ಯದ ಆರ್ಥಿಕ ಪರಿಸ್ಥಿತಿಯನ್ನು ನೋಡಿ ಆರ್ ಬಿ ಐ ರೆಪೋ ದರ ಏರಿಕೆ ಅಥವಾ ಇಳಿಕೆ ನಿರ್ಧಾರ ಕೈಗೊಳ್ಳುತ್ತದೆ. ಆರ್ ಬಿ ಐ ಬ್ಯಾಂಕ್ ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ರೆಪೋ ದರವೆಂದು ಕರೆಯಲಾಗುತ್ತದೆ. ಬ್ಯಾಂಕ್ ಗಳು ಗ್ರಾಹಕರಿಗೆ ನೀಡುವ ಬಡ್ಡಿ ದರವನ್ನು ರೆಪೋ ದರ ನಿರ್ಧರಿಸಿರುತ್ತದೆ. ಆರ್ ಬಿ ಐ ರೆಪೋ ದರ ಹೆಚ್ಚಿಸುತ್ತಿದ್ದಂತೆ ತಮ್ಮ ಮೇಲೆ ಬೀಳುವ ಹೆಚ್ಚಿನ ಹೊರೆಯನ್ನು ಬ್ಯಾಂಕ್ ಗಳು ಗ್ರಾಹಕರ ಮೇಲೆ ಹೊರಿಸುತ್ತವೆ. ಇದ್ರಿಂದ ಬ್ಯಾಂಕ್ ಸಾಲದ ಬಡ್ಡಿ ದರ ಹೆಚ್ಚಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...