alex Certify
ಕನ್ನಡ ದುನಿಯಾ       Mobile App
       

Kannada Duniya

ರೆಪೋ ದರ ಏರಿಸದೆ ‘ನೆಮ್ಮದಿ’ ನೀಡಿದ ಆರ್.ಬಿ.ಐ.

ನಿರೀಕ್ಷೆಯಂತೆ ಆರ್.ಬಿ.ಐ. ಹಣಕಾಸಿನ ನೀತಿ ಸಮಿತಿ ಜನಸಾಮಾನ್ಯರಿಗೆ ನೆಮ್ಮದಿ ಸುದ್ದಿ ನೀಡಿದೆ. ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾ ಸ್ಥಿತಿಯನ್ನು ಕಾಯ್ದುಕೊಂಡಿದೆ. ರೆಪೋ ದರ ಶೇಕಡಾ 6.5 ನಷ್ಟಿದ್ದು ಯಾವುದೇ ಬದಲಾವಣೆಯಾಗಿಲ್ಲ. ರಿಸರ್ವ್ ರೆಪೋ ದರದಲ್ಲಿ ಕೂಡ ಶೇಕಡಾ 6.25 ನಷ್ಟಿದೆ.

ರಿಸರ್ವ್ ಬ್ಯಾಂಕ್ ಎಸ್ಎಲ್ಆರ್ ನಲ್ಲಿ ಇಳಿಕೆ ಮಾಡಿದೆ. ಜನವರಿ ನಂತ್ರ ಎಸ್ಎಲ್ಆರ್ ಶೇಕಡಾ 0.25 ನಷ್ಟು ಇಳಿಕೆಯಾಗಲಿದೆ. ಎಸ್ಎಲ್ಆರ್ ಪ್ರತಿ ಕ್ವಾರ್ಟರ್ ಗೆ 0.25ನಷ್ಟು ಇಳಿಕೆಯಾಗಲಿದ್ದು, ಶೇಕಡಾ 18 ರಷ್ಟಾಗುವವರೆಗೆ ಈ ಇಳಿಕೆ ಮುಂದುವರೆಯಲಿದೆ. ಸದ್ಯ ಎಸ್ಎಲ್ಆರ್ ದರ ಶೇಕಡಾ 19.5 ರಷ್ಟಿದೆ.

ಜೂನ್ ನಿಂದ ಈವರೆಗೆ ರಿಸರ್ವ್ ಬ್ಯಾಂಕ್ ಎರಡು ಬಾರಿ ರೆಪೋ ದರದಲ್ಲಿ ಹೆಚ್ಚಳ ಮಾಡಿದೆ. ರೆಪೋ ದರ ಹೆಚ್ಚಾದ್ರೆ ಬ್ಯಾಂಕ್ ಗಳ ಮೇಲೆ ಹೊರೆ ಹೆಚ್ಚಾಗಲಿದೆ. ಬ್ಯಾಂಕ್ ತಮ್ಮ ಹೆಚ್ಚಿನ ಹೊರೆಯನ್ನು ಗ್ರಾಹಕರ ಮೇಲೆ ಹೊರಿಸುತ್ತವೆ. ಇದ್ರಿಂದ ಗೃಹ ಸಾಲ, ವಾಹನ ಸಾಲ ಸೇರಿದಂತೆ ಎಲ್ಲ ರೀತಿಯ ಸಾಲಗಳು ದುಬಾರಿಯಾಗಲಿವೆ. ಆದ್ರೆ ಈ ಬಾರಿ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಾಗಾಗಿ ಸಾಲಗಳು ದುಬಾರಿಯಾಗುವುದಿಲ್ಲ. ಆದ್ರೆ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಘೋಷಣೆಗೂ ಮುನ್ನವೇ ಕೆಲ ಬ್ಯಾಂಕ್ ಗಳು ತಮ್ಮ ಸಾಲವನ್ನು ದುಬಾರಿ ಮಾಡಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...