alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಮತ್ತೆ ಏರಿಕೆಯಾಗಲಿದೆ ರೆಪೋ ದರ: ದುಬಾರಿಯಾಗಲಿದೆ ಮನೆ ಸಾಲ…?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಕ್ಟೋಬರ್ 4ರಂದು ಹಣಕಾಸು ನೀತಿ ಘೋಷಣೆ ಮಾಡಲಿದೆ. ಈ ನೀತಿಯಲ್ಲಿ ಆರ್. ಬಿ .ಐ. ರೆಪೋ ದರವನ್ನು ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವೇ ಇದಕ್ಕೆ ಕಾರಣವಾಗಲಿದೆ.

ಐಟಿ ಪ್ರಕಾರ, ಆರ್. ಬಿ. ಐ . ರೆಪೋ ದರವನ್ನು ಶೇಕಡಾ 0.5 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳನ್ನು ಸೇರಿಸಿ ಆರ್. ಬಿ. ಐ. ರೆಪೋ ದರವನ್ನು ಏರಿಕೆ ಮಾಡಲಿದೆ. ಕೆಲ ದಿನಗಳ ಹಿಂದಷ್ಟೇ ಆರ್. ಬಿ. ಐ. ರೆಪೋ ದರದಲ್ಲಿ ಏರಿಕೆ ಮಾಡಿತ್ತು. ರೂಪಾಯಿ ಮೌಲ್ಯ ಕುಸಿತಕ್ಕೆ ಬ್ರೇಕ್ ಹಾಕಲು ಮತ್ತೆ ರೆಪೋ ದರವನ್ನು ಏರಿಸಲಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಗುರುವಾರ ರೂಪಾಯಿ ಮೌಲ್ಯ 72 ಕ್ಕೆ ಬಂದು ನಿಂತಿದೆ. ಆರ್. ಬಿ. ಐ. ರೆಪೋ ದರದಲ್ಲಿ ಏರಿಕೆ ಮಾಡಿದ್ರೆ ಬ್ಯಾಂಕ್ ಕೂಡ ಸಾಲದ ಬಡ್ಡಿ ದರವನ್ನು ಏರಿಸಲಿದೆ. ಇದ್ರಿಂದ ಮನೆ ಹಾಗೂ ಆಟೋ ಸಾಲ ದುಬಾರಿಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...