alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಖರೀದಿದಾರರಿಗೆ ಸಿಹಿ ಸುದ್ದಿ ನೀಡಿದ ಆರ್.ಬಿ.ಐ.

ಮನೆ ಖರೀದಿಸುವವರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಿಹಿ ಸುದ್ದಿಯೊಂದನ್ನು ನೀಡಿದೆ. ಗೃಹ ಸಾಲ ಮಿತಿಯನ್ನು ಮಹಾನಗರಗಳಲ್ಲಿ 28 ಲಕ್ಷ ರೂಪಾಯಿಗಳಿಂದ 35 ಲಕ್ಷ ರೂ.ಗಳಿಗೆ ಹಾಗೂ ಇತರೆ ನಗರಗಳಲ್ಲಿ 20 ಲಕ್ಷ ರೂಪಾಯಿಗಳಿಂದ 25 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿದೆ.

ಅಲ್ಲದೆ ಕೈಗೆಟಕುವ ವಸತಿ ಯೋಜನೆಗಳ ಅಪಾರ್ಟ್ಮೆಂಟ್ ವೆಚ್ಚ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ 45 ಲಕ್ಷ ರೂ. ಮತ್ತು ಇತರ ನಗರಗಳಲ್ಲಿ 30 ಲಕ್ಷ ರೂ. ಮೀರಬಾರದೆಂದು ನಿಗದಿಪಡಿಸಲಾಗಿದೆ.

ಈ ಕುರಿತ ಆದೇಶ ಜೂನ್ ಅಂತ್ಯದ ವೇಳೆಗೆ ಹೊರಬೀಳುವ ನಿರೀಕ್ಷೆ ಇದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಈ ತೀರ್ಮಾನದಿಂದಾಗಿ ಎಲ್ಲರಿಗೂ ಸೂರು ಒದಗಿಸುವ ಕೇಂದ್ರ ಸರ್ಕಾರದ ಯತ್ನಕ್ಕೆ ಪೂರಕವಾಗಲಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...