alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್.ಬಿ.ಐ. ರೆಪೊ ದರ: ಈ ಬಾರಿಯೂ ಬದಲಾವಣೆ ಇಲ್ಲ…?

ನವದೆಹಲಿ: ಬಜೆಟ್ ಮಂಡನೆಯಾದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ನೇತೃತ್ವದಲ್ಲಿ ಮೊದಲ ಆರ್ಥಿಕ ಪರಾಮರ್ಶೆ ಸಭೆ ಏಪ್ರಿಲ್ 4 ಮತ್ತು 5 ರಂದು ನಡೆಯಲಿದೆ.

ಸಭೆಯಲ್ಲಿ ರೆಪೊ ದರವನ್ನು(ಬಡ್ಡಿದರ) ಈ ಬಾರಿಯೂ ಯಥಾಸ್ಥಿತಿಯಲ್ಲಿ ಮುಂದುವರೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಕಳೆದ ತ್ರೈಮಾಸಿಕಗಳಲ್ಲಿ ಚಿಲ್ಲರೆ ಹಣದುಬ್ಬರ ಕಡಿಮೆಯಾಗ್ತಿದೆ. ಈ ಕಾರಣದಿಂದ ರೆಪೊ ದರವನ್ನು ಕಡಿತ ಮಾಡಬೇಕೆಂದು ಬೇಡಿಕೆ ಹೆಚ್ಚಾಗಿದೆ.

ಆದರೆ, ಜಾಗತಿಕ ಮಟ್ಟದಲ್ಲಿ ಇಂಧನ ದರ ಏರಿಕೆಯಾಗುತ್ತಿರುವುದರಿಂದ ದೇಶಿಯವಾಗಿ ಹಣದುಬ್ಬರ ಏರಿಕೆಯಾಗಬಹುದಾಗಿದೆ. ಈ ಕಾರಣದಿಂದ ಬಡ್ಡಿದರವನ್ನು ಹೆಚ್ಚಳ ಇಲ್ಲವೇ ಕಡಿಮೆ ಮಾಡದೇ ಯಥಾಸ್ಥಿತಿಯಲ್ಲಿ ಮುಂದುವರೆಸುವ ಸಾಧ್ಯತೆ ಇದೆ.

ಒಂದು ವೇಳೆ ಮುಂಗಾರು ಉತ್ತಮವಾದಲ್ಲಿ ಆಗಸ್ಟ್ ನಲ್ಲಿ ಬಡ್ಡಿದರವನ್ನು ಕಡಿತ ಮಾಡಬಹುದಾಗಿದೆ. ಸದ್ಯಕ್ಕಂತೂ ರೆಪೊ ದರದಲ್ಲಿ ಪರಿಷ್ಕರಣೆ ಮಾಡುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...