alex Certify
ಕನ್ನಡ ದುನಿಯಾ       Mobile App
       

Kannada Duniya

ಗಮನಿಸಿ: ಆರ್.ಬಿ.ಐ. ನೌಕರರ ಮುಷ್ಕರದಿಂದ ಈ ಸೇವೆಗಳಲ್ಲಿ ಆಗಬಹುದು ವ್ಯತ್ಯಯ

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಧಿಕಾರಿಗಳು ಹಾಗೂ ಉದ್ಯೋಗಿಗಳ ಸಂಯುಕ್ತ ವೇದಿಕೆ(ಯುಎಫ್‌ಆರ್‌ಬಿಐಒಇ) ಸೆ.4 ಹಾಗೂ 5ರಂದು ಮುಷ್ಕರಕ್ಕೆ ಕರೆಕೊಟ್ಟಿದ್ದು, ಬ್ಯಾಂಕಿಂಗ್‌ ಸೇವೆಗಳಿಗೆ ಅಲ್ಪಮಟ್ಟಿನ ಅಡಚಣೆಯಾಗಲಿವೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಂಘಟನೆ ಒತ್ತಾಯಿಸಿದ್ದು, ಅಪೆಕ್ಸ್‌ ಬ್ಯಾಂಕ್‌ನ ಕೆಲ ಸೇವೆಗಳಿಗೆ ಮುಷ್ಕರಿಂದ ಅಡಚಣೆಯಾಗಲಿದೆ ಎನ್ನಲಾಗಿದೆ.

ಭವಿಷ್ಯ ನಿಧಿ ಹಾಗೂ ಪಿಂಚಣಿಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆ ಈಡೇರಿಸಲು ಆರ್‌ಬಿಐ ಸಿಬ್ಬಂದಿ ಮುಷ್ಕರ ನಡೆಸುತ್ತಿರುವುದರಿಂದ ಖಾಸಗಿ ಬ್ಯಾಂಕಿಂಗ್‌ ಸೇವೆಗಳಿಗೆ ಧಕ್ಕೆಯಾಗದು ಎಂದು ರಾಷ್ಟ್ರೀಯ ಬ್ಯಾಂಕ್‌ ನೌಕರರ ಸಂಘದ ಉಪಾಧ್ಯಕ್ಷ ಅಶ್ವನಿ ರಾಣಾ ಹೇಳಿದ್ದಾರೆ.

ಆರ್‌ಟಿಜಿಎಸ್‌, ಎನ್‌ಇಎಫ್‌ಟಿನಂತಹ ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಈ ಮುಷ್ಕರದಿಂದ ತೊಂದರೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಉದ್ಯಮಿಗಳ ವಹಿವಾಟು ಹಾಗೂ ಸ್ಟಾಕ್‌ ಮಾರ್ಕೆಟ್‌ ವಹಿವಾಟುಗಳಿಗೆ ಅಡಚಣೆಯಾಗಲಿದೆ.

ಗವರ್ನರ್‌ ಊರ್ಜಿತ್‌ ಪಟೇಲ್‌ ಅವರು, ಸಾಮೂಹಿಕ ರಜೆಯಲ್ಲಿ ತೆರಳುವ ಸಂಘಟನೆಯ ನಿರ್ಧಾರವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು. ಆದರೆ ಇದನ್ನು ಸಂಘಟನೆ ತಿರಸ್ಕರಿಸಿತ್ತು. ಗುರುವಾರ ಹಾಗೂ ಶುಕ್ರವಾರ ಬ್ಯಾಂಕ್‌ ಎಂದಿನಂತೆ ತೆರೆದಿರಲಿದೆ. ಸೆ.8 ರಂದು ಶನಿವಾರವಾದ್ದರಿಂದ ಮತ್ತೆ ರಜೆ ಇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...