alex Certify
ಕನ್ನಡ ದುನಿಯಾ       Mobile App
       

Kannada Duniya

ಬದಲಾಗಲಿದೆ ಎ.ಟಿ.ಎಂ. ಕಾರ್ಯ ವಿಧಾನ

atm-eye

ನವದೆಹಲಿ: ಎ.ಟಿ.ಎಂ. ಕಾರ್ಡ್ ಕಾರ್ಯವಿಧಾನ ಬದಲಾಗಲಿದೆ. ಎ.ಟಿ.ಎಂ. ಕೇಂದ್ರಗಳಿಗೆ ಹೋಗಿ ಹಣ ಪಡೆಯಲು ನೀವು ಪಾಸ್ ವರ್ಡ್ ಬಳಸುವುದು ಇನ್ಮುಂದೆ ಇಲ್ಲವಾಗಲಿದೆ.

ಕಣ್ಣು ಅಥವಾ ಬೆರಳ ತುದಿಯನ್ನೇ ಎ.ಟಿ.ಎಂ. ಪಾಸ್ ವರ್ಡ್ ದೃಢೀಕರಣವಾಗಿ ಬಳಸುವ ಸೌಲಭ್ಯ ಜಾರಿಗೆ ಬರಲಿದೆ. 2017 ರ ಜನವರಿಯಿಂದಲೇ ಎ.ಟಿ.ಎಂ. ಕಾರ್ಡ್ ವ್ಯವಹಾರಕ್ಕೆ ನೀವು ಕಣ್ಣು ಅಥವಾ ಬೆರಳ ದೃಢೀಕರಣ ನೀಡಬಹುದಾಗಿದೆ. ದೇಶದಲ್ಲಿ ಬಹು ದೊಡ್ಡದೆನ್ನಲಾದ 32 ಲಕ್ಷ ಡೆಬಿಟ್ ಕಾರ್ಡ್ ಮಾಹಿತಿ ಸೋರಿಕೆ ಪ್ರಕರಣದ ಹಿನ್ನಲೆಯಲ್ಲಿ ಗ್ರಾಹಕರ ಹಿತರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಆರ್.ಬಿ.ಐ. ಸುತ್ತೋಲೆ ಹೊರಡಿಸಿದೆ.

ಹೊಸ ಸೌಲಭ್ಯ ಜಾರಿಯಾದಲ್ಲಿ ಎ.ಟಿ.ಎಂ. ಯಂತ್ರ ಗ್ರಾಹಕರ ಕಣ್ಣಿನ ರೆಟಿನಾ ಇಲ್ಲವೇ ಬೆರಳಚ್ಚನ್ನು ಸ್ಕ್ಯಾನ್ ಮಾಡಿ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್ ವ್ಯವಹಾರವನ್ನು ದೃಢೀಕರಿಸಲಿದೆ. ಇದರಿಂದ ಕಾರ್ಡ್ ಗಳ ದುರ್ಬಳಕೆಯನ್ನು ತಡೆಯಬಹುದಾಗಿದೆ.

ಬ್ಯಾಂಕ್ ಗಳಿಗೆ ಈ ರೀತಿಯ ಸೌಲಭ್ಯವನ್ನು ಒದಗಿಸುವ ಕುರಿತಂತೆ ಆರ್.ಬಿ.ಐ. ಸೂಚನೆ ನೀಡಿದೆ. ಆಧಾರ್ ಕಾರ್ಡ್ ಆಧಾರಿತ ಬೆರಳು ಅಥವಾ ಕಣ್ಣಿನ ಎ.ಟಿ.ಎಂ. ಸೇವೆ ನೀಡುವಂತೆ ಆರ್.ಬಿ.ಐ. ನಿಂದ ಸುತ್ತೋಲೆ ಹೊರಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...