alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಸೆಂಬರ್ ಅಂತ್ಯಕ್ಕೆ ಮನೆ ಬಾಗಿಲಿಗೆ ಬ್ಯಾಂಕ್

ನವದೆಹಲಿ: ಬ್ಯಾಂಕ್ ಗಳನ್ನು ಇನ್ನಷ್ಟು ಗ್ರಾಹಕ ಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸಲಹೆ ನೀಡಿದ್ದು, ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ಮನೆ ಬಾಗಿಲಲ್ಲೇ ಸೇವೆ ನೀಡುವಂತೆ ಸೂಚಿಸಿದೆ.

70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು, ದಿವ್ಯಾಂಗರು ವಿಭಿನ್ನ ನಿಶ್ಯಕ್ತರಾದವರಿಗೆ ಅವರ ಮನೆ ಬಾಗಿಲಲ್ಲೇ ನಗದು, ಚಕ್ ಪುಸ್ತಕ, ಡಿ.ಡಿ., ಸೇರಿ ಮೂಲ ಸೇವೆಗಳನ್ನು ಒದಗಿಸಬೇಕೆಂದು ಬ್ಯಾಂಕ್ ಗಳಿಗೆ ನಿರ್ದೇಶಿಸಲಾಗಿದೆ.

ಹಿರಿಯ ನಾಗರಿಕರು ಮತ್ತು ದಿವ್ಯಾಂಗರು ಬ್ಯಾಂಕ್ ಗಳಿಗೆ ಹೋಗಿ ಬರಲು ಆಗುವ ತೊಂದರೆಯನ್ನು ಗಮನಿಸಿ ಮನೆ ಬಾಗಿಲಿಗೆ ಸೌಲಭ್ಯ ನೀಡಲಾಗಿದೆ.

ಡಿಜಿಟಲ್ ವಹಿವಾಟು ಮತ್ತು ಎ.ಟಿ.ಎಂ. ಬಳಕೆಗೆ ಉತ್ತೇಜನ ನೀಡಲಾಗಿದೆ. ಇದರ ನಡುವೆಯೂ ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ಈ ಅನುಕೂಲ ಕಲ್ಪಿಸಲಾಗಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಮನೆ ಬಾಗಿಲಲ್ಲೇ ಬ್ಯಾಂಕ್ ಸೇವೆ ದೊರೆಯಲಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...