alex Certify
ಕನ್ನಡ ದುನಿಯಾ       Mobile App
       

Kannada Duniya

ಶೇಕಡಾ 99.3 ನಿಷೇಧಿತ ನೋಟುಗಳು ವಾಪಸ್

ನಿಷೇಧಿತ ಬಹುತೇಕ ಎಲ್ಲ ನೋಟುಗಳು ಭಾರತೀಯ ರಿಸರ್ವ್ ಬ್ಯಾಂಕ್ ತಲುಪಿದೆಯಂತೆ. ಬುಧವಾರ 2017-2018ರ ವಾರ್ಷಿಕ ವರದಿಯಲ್ಲಿ ಬ್ಯಾಂಕ್ ಈ ವಿಷ್ಯವನ್ನು ತಿಳಿಸಿದೆ.

ಹಳೆಯ 500 ಹಾಗೂ ಸಾವಿರ ಮುಖಬೆಲೆಯ ಶೇಕಡಾ 99.30ರಷ್ಟು ನೋಟುಗಳು ಬ್ಯಾಂಕ್ ಗೆ ವಾಪಸ್ ಆಗಿವೆಯಂತೆ. ನವೆಂಬರ್ 8, 2016 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಶಾಕ್ ನೀಡಿದ್ದರು. ಮಹತ್ವದ ನಿರ್ಧಾರವೊಂದನ್ನು ಘೋಷಣೆ ಮಾಡಿದ್ದರು. 500 ಹಾಗೂ ಸಾವಿರ ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿದ್ದರು.

ಆರ್ ಬಿ ಐ ವರದಿ ಪ್ರಕಾರ, ನವೆಂಬರ್ 8, 2016 ರ ವೇಳೆಗೆ ಮಾರುಕಟ್ಟೆಯಲ್ಲಿ 15.42 ಲಕ್ಷ ಕೋಟಿ 500 ಹಾಗೂ ಸಾವಿರ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ನಿಷೇಧದ ನಂತ್ರ ನೋಟುಗಳ ವಿನಿಮಯ ನಡೆದಿತ್ತು. ಬ್ಯಾಂಕ್ ಗಳು ಹಳೆ ನೋಟುಗಳನ್ನು ಪಡೆದು ಹೊಸ ನೋಟುಗಳನ್ನು ನೀಡಿದ್ದವು. ಎರಡು ವರ್ಷಗಳ ನಂತ್ರ ರಿಸರ್ವ್ ಬ್ಯಾಂಕ್ ನಿಷೇಧಿತ ನೋಟುಗಳ ಲೆಕ್ಕದ ವರದಿ ನೀಡಿದೆ. ಸದ್ಯ ರಿಸರ್ವ್ ಬ್ಯಾಂಕ್ ಗೆ 15.31 ಲಕ್ಷ ಕೋಟಿ ನಿಷೇಧಿತ ನೋಟುಗಳು ವಾಪಸ್ ಆಗಿವೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...