alex Certify
ಕನ್ನಡ ದುನಿಯಾ       Mobile App
       

Kannada Duniya

ಪತಂಜಲಿ ಸ್ಟೋರ್ ಗೆ ಹೋಗುವ ಮುನ್ನ ಈ ಸುದ್ದಿ ಓದಿ

patanjali_stores_digital_payment_17_12_2016

ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರಕ್ಕೆ ಯೋಗ ಗುರು ಬಾಬಾ ರಾಮ್ ದೇವ್ ಸಂಪೂರ್ಣ ಬೆಂಬಲ ನೀಡಿದ್ದಾರೆ. ಜೊತೆಗೆ ಡಿಜಿಟಲ್ ಭಾರತ ನಿರ್ಮಾಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ನಡೆಯನ್ನು ಸ್ವಾಗತಿಸಿರುವ ರಾಮ್ ದೇವ್, ಸರ್ಕಾರದ ಜೊತೆ ಹೆಜ್ಜೆ ಇಟ್ಟಿದ್ದಾರೆ.

ಇನ್ಮುಂದೆ ಪತಂಜಲಿ ಮಳಿಗೆಗೆ ಹೋಗುವ ಮೊದಲು ಕೈನಲ್ಲಿ ನಗದು ಬದಲು ಕಾರ್ಡ್ ಹಿಡಿದು ನಡೆಯಿರಿ. ಯಾಕೆಂದ್ರೆ ದೇಶದಾದ್ಯಂತ ಇರುವ 5300 ಪತಂಜಲಿ ಮಳಿಗೆಗಳು ಡಿಜಿಟಲ್ ಆಗಲಿವೆ. 50 ರೂಪಾಯಿಗಿಂತ ಹೆಚ್ಚು ಖರೀದಿ ಮಾಡಿದ ಗ್ರಾಹಕರಿಗೆ ಡಿಜಿಟಲ್ ಪಾವತಿ ಮಾಡಲು ಯೋಗ ಗುರು ಬಾಬಾ ರಾಮ್ ದೇವ್ ಅವಕಾಶ ಮಾಡಿಕೊಟ್ಟಿದ್ದಾರೆ.

ನವೆಂಬರ್ ಎರಡನೇ ವಾರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಕ್ಸಿಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಜೊತೆ ಡಿಜಿಟಲ್ ಪಾವತಿ ಬಗ್ಗೆ ಬಾಬಾ ರಾಮ್ ದೇವ್ ಮಾತುಕತೆ ನಡೆಸಿದ್ದಾರೆ. ಪತಂಜಲಿಯ ಎಲ್ಲ ಮಳಿಗೆಗಳನ್ನು ಲಿಂಕ್ ಮಾಡುವಂತೆ ಬ್ಯಾಂಕ್ ಗೆ ಹೇಳಿದ್ದಾರೆ. ಡೆಬಿಟ್ ಕಾರ್ಟ್, ಇ –ವಾಲೆಟ್ ಸೇರಿದಂತೆ ಎಲ್ಲ ರೀತಿಯ ಡಿಜಿಟಲ್ ಪಾವತಿಗೆ ಪತಂಜಲಿ ಅವಕಾಶ ನೀಡಲು ನಿರ್ಧರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...