alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ಷಾ ಬಂಧನಕ್ಕೆ ಬಿಎಸ್ಎನ್ಎಲ್ ನೀಡ್ತಿದೆ ರಾಖಿ ಆಫರ್

ರಕ್ಷಾ ಬಂಧನ 2018ರ ಸಂದರ್ಭದಲ್ಲಿ ಬಿಎಸ್ಎನ್ಎಲ್ ರಾಖಿ ಯೋಜನೆ ಬಿಡುಗಡೆ ಮಾಡಿದೆ. 399 ರೂಪಾಯಿ ಈ ಪ್ಲಾನ್ ನಲ್ಲಿ ಬಿಎಸ್ಎನ್ಎಲ್ ಬಳಕೆದಾರರಿಗೆ ಭರ್ಜರಿ ಆಫರ್ ಸಿಗ್ತಿದೆ. ಬಿಎಸ್ಎನ್ಎಲ್ ರಾಖಿ ಆಫರ್ ನಲ್ಲಿ ಅನಿಯಮಿತ ಕಾಲಿಂಗ್, ಉಚಿತ ರೋಮಿಂಗ್, ಡೇಟಾ, ಎಸ್ಎಂಎಸ್ ನೀಡ್ತಿದೆ.

ಈ ಆಫರ್ 74 ದಿನಗಳ ಸಿಂಧುತ್ವ ಹೊಂದಿದೆ. STV399 ರಾಖಿ ಆಫರ್ ನಲ್ಲಿ ವಿಶೇಷ ಸೌಲಭ್ಯವೊಂದನ್ನು ನೀಡ್ತಿದೆ. ಈ ಪ್ಲಾನ್ ಅಡಿ ಗ್ರಾಹಕರು ಹೊಸ ಹಾಡನ್ನು ಕಾಲರ್ ಟ್ಯೂನ್ ಆಗಿ ಬಳಸಬಹುದಾಗಿದೆ. ಆಗಸ್ಟ್ 26ರಿಂದ ಈ ಪ್ಲಾನ್ ಶುರುವಾಗಲಿದೆ. ದೆಹಲಿ ಹಾಗೂ ಮುಂಬೈ ಗ್ರಾಹಕರಿಗೆ ಮಾತ್ರ ಈ ಆಫರ್ ಸಿಗ್ತಿರೋದು ಉಳಿದವರಿಗೆ ಬೇಸರದ ವಿಚಾರ.

ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕಂಪನಿ 9 ಹಾಗೂ 29 ರೂಪಾಯಿ ಪ್ಲಾನ್ ಶುರು ಮಾಡಿತ್ತು. 9 ರೂಪಾಯಿ ಪ್ಲಾನ್ ನಲ್ಲಿ ಅನಿಯಮಿತ ಡೇಟಾ, ಉಚಿತ ಕಾಲಿಂಗ್ ಹಾಗೂ 100 ಎಸ್ಎಂಎಸ್ ನೀಡ್ತಿದೆ. ಇದ್ರ ಸಿಂಧುತ್ವ ಒಂದು ದಿನ ಮಾತ್ರ. 29 ರೂಪಾಯಿ ಪ್ಲಾನ್ ನಲ್ಲಿ ಕೂಡ ಕಂಪನಿ ಈ ಎಲ್ಲ ಸೌಲಭ್ಯ ನೀಡ್ತಿದೆ. ಇದ್ರ ಸಿಂಧುತ್ವ 7 ದಿನ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...