alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಧಾನಿ, ಶತಾಬ್ಧಿ ಪ್ರಯಾಣಿಕರಿಗೆ ಶುಭ ಸುದ್ದಿ

ನವದೆಹಲಿ: ರೈಲು ಬರುವುದು ವಿಳಂಬವಾದಲ್ಲಿ ಪ್ರಯಾಣಿಕರು ಸಾಮಾನ್ಯವಾಗಿ ನಿಲ್ದಾಣದಲ್ಲಿನ ಅಧಿಕಾರಿಗಳನ್ನು ವಿಚಾರಿಸುತ್ತಾರೆ. ಇನ್ನು ಮುಂದೆ ವಿಚಾರಿಸಬೇಕಿಲ್ಲ. ನಿಮ್ಮ ಮೊಬೈಲ್ ಗೇ ಎಸ್.ಎಂ.ಎಸ್. ಬರಲಿದೆ.

ರಾಜಧಾನಿ ಮತ್ತು ಶತಾಬ್ಧಿ ಪ್ರಯಾಣಿಕರಿಗೆ ಮೊಬೈಲ್ ಫೋನ್ ಗಳ ಮೂಲಕ ರೈಲು ವಿಳಂಬವಾದಲ್ಲಿ ಮಾಹಿತಿ ಸಿಗಲಿದೆ.

ಸದ್ಯ ವೇಯ್ಟಿಂಗ್ ಲಿಸ್ಟ್ ನಲ್ಲಿರುವ ಪ್ರಯಾಣಿಕರಿಗೆ ಸೀಟ್ ದೃಢೀಕರಿಸಿದ ನಂತರ ಎಸ್.ಎಂ.ಎಸ್. ಸಂದೇಶ ಬರುತ್ತಿದೆ. ಶನಿವಾರದಿಂದ ಎಲ್ಲಾ ರಾಜಧಾನಿ ಮತ್ತು ಶತಾಬ್ಧಿ ರೈಲುಗಳು 1 ಗಂಟೆಗಿಂತ ಹೆಚ್ಚು ವಿಳಂಬವಾದಲ್ಲಿ ಪ್ರಯಾಣಿಕರಿಗೆ ಎಸ್.ಎಂ.ಎಸ್. ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ರೈಲ್ವೇ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈ ಸೌಲಭ್ಯ ಪಡೆಯುವ ಪ್ರಯಾಣಿಕರು ಸೀಟ್ ಬುಕ್ ಮಾಡುವಾಗ, ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಮುಂದಿನ ದಿನಗಳಲ್ಲಿ ಎಲ್ಲಾ ರೈಲುಗಳಿಗೂ ಈ ಸೌಲಭ್ಯ ವಿಸ್ತರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇದು ಪ್ರಯಾಣಿಕ ಸ್ನೇಹಿ ಉಚಿತ ಸೇವೆಯಾಗಿದ್ದು, ವೆಚ್ಚವನ್ನು ರೈಲ್ವೇ ಇಲಾಖೆ ಭರಿಸಲಿದೆ. ಕೆಲವು ರಾಜಧಾನಿ ಮತ್ತು ಶತಾಬ್ಧಿ ರೈಲುಗಳಲ್ಲಿ ಸೇವೆಯ ಕುರಿತಾಗಿ ವಿಚಾರಣೆ ನಡೆಸಲಾಗಿದ್ದು, ಕೆಲವು ತೊಂದರೆ ಕಂಡು ಬಂದ ಹಿನ್ನಲೆಯಲ್ಲಿ ಸರಿಪಡಿಸಲಾಗುತ್ತಿದೆ.

ಒಟ್ಟು 23 ಜೋಡಿ ರಾಜಧಾನಿ, 26 ಜೋಡಿ ಶತಾಬ್ಧಿ ರೈಲುಗಳು ಚಾಲನೆಯಲ್ಲಿವೆ. ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲು ಹಲವು ರೈಲುಗಳ ವೇಗವನ್ನು ಹೆಚ್ಚಿಸಲಾಗಿದೆ. ಆದರೂ, ಕೆಲವೊಮ್ಮೆ ಕಾರಣಾಂತರದಿಂದ ವಿಳಂಬವಾದಲ್ಲಿ ಎಸ್.ಎಂ.ಎಸ್. ಮೂಲಕ ಸಂದೇಶ ಕಳಿಸಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...