alex Certify
ಕನ್ನಡ ದುನಿಯಾ       Mobile App
       

Kannada Duniya

2 ರೂ. ರಾಖಿ ತಯಾರಿಸಿ ಕೋಟಿ ಗಳಿಸ್ತಾರೆ ಮಹಿಳೆಯರು

images

ಸಹೋದರ-ಸಹೋದರಿಯರ ಬಾಂಧವ್ಯ ಬೆಸೆಯುವ ರಾಖಿ ಹಬ್ಬವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಇದೇ ರಾಖಿ ರಾಜಸ್ಥಾನದ ಅಲ್ವಾರ್ ನ 10 ಸಾವಿರ ಮಹಿಳೆಯರಿಗೆ ವರ್ಷ ಪೂರ್ತಿ ಉದ್ಯೋಗ ನೀಡ್ತಾ ಇದೆ. ಇಲ್ಲಿನ ಮಹಿಳೆಯರು ಸಹೋದರಿಗಾಗಿ ರಾಖಿ ತಯಾರಿಸುತ್ತಿದ್ದಾರೆ.

ಇಲ್ಲಿನ ಮಹಿಳೆಯರು ಉನ್ನತ ಶಿಕ್ಷಣ ಪಡೆದಿಲ್ಲ. ಹಾಗಾಗಿ ಇವರಿಗೆ ಬೇರೆ ಉದ್ಯೋಗ ಸಿಗೋದಿಲ್ಲ. ಹಾಗಂತ ಕೈಕಟ್ಟಿ ಕುಳಿತಿಲ್ಲ. ವರ್ಷ ಪೂರ್ತಿ ರಾಖಿ ತಯಾರಿಸ್ತಾರೆ. ಇವರು ತಯಾರಿಸಿದ ರಾಖಿ ಭಾರತವೊಂದೇ ಅಲ್ಲ 24 ದೇಶಗಳಿಗೆ ರವಾನೆಯಾಗುತ್ತದೆ.

ವರ್ಷಪೂರ್ತಿ ಸುಮಾರು 100 ಕೋಟಿ ಆದಾಯ ಗಳಿಸ್ತಾರೆ ಈ ಮಹಿಳೆಯರು. ರಾಖಿ ಮಾರಾಟ ಮಾಡುವ ಶೇಕಡಾ 13ರಷ್ಟು ಕಂಪನಿಗಳು ಈ ಮಹಿಳೆಯರ ಕೈನಲ್ಲಿ ಸಿದ್ಧವಾದ ರಾಖಿಯನ್ನು ಖರೀದಿ ಮಾಡುತ್ತವೆ. ಈ ಮಹಿಳೆಯರು ತಯಾರಿಸಿದ ರಾಖಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. 2 ರೂಪಾಯಿಯಿಂದ 200 ರೂಪಾಯಿವರೆಗಿನ ರಾಖಿ ತಯಾರಿಸುತ್ತಾರೆ ಮಹಿಳೆಯರು. ಕಡಿಮೆ ಓದಿರಬಹುದು ಆದ್ರೆ ಜನರ ಟೇಸ್ಟ್ ಏನು ಎಂಬುದು ಇವರಿಗೆ ಗೊತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...