alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಫ್ಲೆಕ್ಸಿ ಫೇರ್ ಮುಂಗಡ ಬುಕ್ಕಿಂಗ್ ಆರಂಭ

ಭಾರತೀಯ ರೈಲ್ವೆಯು ಫ್ಲೆಕ್ಸಿ ಫೇರ್ ಅನ್ನು ಪರಿಷ್ಕರಿಸಿದ್ದು ಮುಂದಿನ ವರ್ಷದ ಮಾರ್ಚ್ 15ರಿಂದ ಅದನ್ನು ಜಾರಿಗೆ ತರಲಿದೆ. ಆದರೆ ಮುಂಗಡ ಬುಕಿಂಗ್ ವ್ಯವಸ್ಥೆಯನ್ನು ಈಗಾಗಲೇ ಆರಂಭಿಸಿದ್ದು, 2019 ರ ಮಾ. 15ರ ನಂತರದ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡುವವರಿಗೆ ಈ ಸೌಲಭ್ಯ ಸಿಗಲಿದೆ.

ಆ ನಿಟ್ಟಿನಲ್ಲಿ ಸಾಫ್ಟ್ ವೇರ್ ನಲ್ಲಿ ಅಗತ್ಯ ಬದಲಾವಣೆ ಕೂಡ ಮಾಡಲಾಗಿದ್ದು, ರಾಜಧಾನಿ, ದುರಂತೊ ಮತ್ತು ಶತಾಬ್ದಿ ರೈಲುಗಳಿಗೆ ಇದು ಅನ್ವಯಿಸಲಿದೆ.

ಹಾಗೆ ನೋಡಿದರೆ ಫ್ಲೆಕ್ಸಿ ಫೇರ್ ಅನ್ನು 2016 ರಲ್ಲೇ 44 ರಾಜಧಾನಿ, 46 ಶತಾಬ್ದಿ ಹಾಗೂ 52 ದುರಂತೊಗಳಿಗೆ ಜಾರಿ ಮಾಡಲಾಗಿತ್ತು. ಅದರೆ ಈ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರಿಂದ ಆಕ್ಷೇಪ ವ್ಯಕ್ತವಾದ್ದರಿಂದ ಕ್ರಮೇಣ ಹಿಂದೆಗೆದುಕೊಳ್ಳಲಾಗಿತ್ತು.

ತತ್ಪರಿಣಾಮ ಅಧಿಕ ದರದಿಂದಾಗಿ ಕೆಲವು ಬರ್ತ್‍ಗಳು ಖಾಲಿ ಉಳಿಯಲಾರಂಭಿಸಿದ್ದರಿಂದ ಪರಿಶೀಲನಾ ಸಮಿತಿ ಮತ್ತೆ ಫ್ಲೆಕ್ಸಿ ಫೇರ್ ಶಿಫಾರಸು ಮಾಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...