alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಮುಂಗಡವಲ್ಲದ ರೈಲ್ವೇ ಟಿಕೆಟ್ ಇನ್ನು ಆನ್‍ ಲೈನ್ ನಲ್ಲಿ ಲಭ್ಯ

ಮುಂಗಡವಲ್ಲದ ರೈಲ್ವೆ ಟಿಕೆಟ್‍ಗಳನ್ನು ಅನ್‍ ಲೈನ್‍ನಲ್ಲೇ ಖರೀದಿಸುವ ವ್ಯವಸ್ಥೆ ನವೆಂಬರ್ 1ರಿಂದ ದೇಶಾದ್ಯಂತ ಜಾರಿಯಾಗಲಿದೆ. ಭಾರತೀಯ ರೈಲ್ವೆ ಇಲಾಖೆಯ ಯುಟಿಎಸ್ ಮೊಬೈಲ್ ಆಪ್ ಮೂಲಕ ಪ್ರಯಾಣಿಕರು ಆನ್‍ ಲೈನ್‍ನಲ್ಲಿ ಮುಂಗಡವಲ್ಲದ ಟಿಕೆಟ್ ಖರೀದಿಸಬಹುದಾಗಿದೆ.

ಅಂದಹಾಗೆ ಇದು ಹೊಸ ಯೋಜನೆ ಏನಲ್ಲ. ನಾಲ್ಕು ವರ್ಷಗಳ ಹಿಂದೆಯೇ ಜಾರಿಗೊಂಡಿದ್ದ ಈ ಯೋಜನೆಯನ್ನು ರೈಲ್ವೆ ಇಲಾಖೆಯು ನವೆಂಬರ್ 1ರಿಂದ ದೇಶದೆಲ್ಲೆಡೆ ಲಭಿಸುವಂತೆ ಕ್ರಮಕೈಗೊಂಡಿದೆ.

ನಾಲ್ಕು ವರ್ಷಗಳ ಹಿಂದೆ ಮೊದಲಿಗೆ ಮುಂಬೈನಲ್ಲಿ ಪ್ರಾರಂಭವಾದ ಇದು ಬಳಿಕ ದೆಹಲಿ-ಪಾಲ್ವಾಲ್ ಹಾಗೂ ಚೆನ್ನೈನಲ್ಲೂ ಜಾರಿಗೆ ಬಂತು. ಇನ್ನು ಮುಂದೆ ರೈಲ್ವೆಯ ಎಲ್ಲ ವಲಯಗಳಲ್ಲೂ ಈ ವ್ಯವಸ್ಥೆ ಲಭಿಸಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಈ ಆಪ್ ಮೂಲಕ ದೂರ ಪ್ರಯಾಣದ ಟಿಕೆಟ್ ಕೂಡ ಖರೀದಿಸಬಹುದಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಯುಟಿಎಸ್ ಮೊಬೈಲ್ ಆಪ್ ಗೆ 45 ಲಕ್ಷ ಅಧಿಕೃತ ಬಳಕೆದಾರರಿದ್ದು, ಪ್ರತಿನಿತ್ಯ ಸರಾಸರಿ 87 ಸಾವಿರ ಟಿಕೆಟ್ ಇದರ ಮೂಲಕ ಖರೀದಿ ಆಗುತ್ತಿದೆ. ಒಮ್ಮೆಗೆ ನಾಲ್ಕು ಟಿಕೆಟ್‍ಗಳನ್ನಷ್ಟೇ ಖರೀದಿಸಬಹುದು ಎಂದು ಇಲಾಖೆ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...