alex Certify
ಕನ್ನಡ ದುನಿಯಾ       Mobile App
       

Kannada Duniya

100 ರೂಪಾಯಿ ಗಳಿಸಲು ರೈಲ್ವೆ ಇಲಾಖೆ ಎಷ್ಟು ಹಣ ಖರ್ಚು ಮಾಡುತ್ತೆ ಗೊತ್ತಾ…?

ಭಾರತೀಯ ರೈಲ್ವೆ ಇಲಾಖೆ, ದೇಶದ ಉತ್ತಮ ಸಂಪರ್ಕ ಸಾಧನ. ಬಡ ಹಾಗೂ ಮಧ್ಯಮ ವರ್ಗದ ಜನರ ಜೀವನಾಡಿ. ತನ್ನ ಉತ್ಕೃಷ್ಟ ಸೇವೆ ಹಾಗೂ ಶುಚಿತ್ವದಿಂದಲೇ ಹೆಸರುವಾಸಿ. ಹಾಗಿದ್ರೆ ರೈಲ್ವೆ ಇಲಾಖೆ ಆರ್ಥಿಕ ಸ್ಥಿತಿ ಗತಿ ಹೇಗಿದೆ ಎಂದು ಒಮ್ಮೆ ಅವಲೋಕಿಸಿದ್ರೆ, ದೇಶದ ಅತಿ ದೊಡ್ಡ ಸಂಪರ್ಕ ಇಲಾಖೆ ಸದ್ಯ ನಷ್ಟದಲ್ಲಿದೆ ಎಂದು ಹೇಳಲಾಗಿದೆ.

ಹೌದು….ರೈಲ್ವೆ ಇಲಾಖೆ ಹೊರಡಿಸಿರುವ ಅಂಕಿ ಅಂಶಗಳ ಅನ್ವಯ ಈ ಸತ್ಯ ಬೆಳಕಿಗೆ ಬಂದಿದೆ. ಇಲಾಖೆ 100 ರೂಪಾಯಿ ಸಂಪಾದಿಸಲು ವೆಚ್ಚಮಾಡುವ ಹಣ ಬರೋಬ್ಬರಿ 111 ರೂಪಾಯಿ. ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಸಂಪರ್ಕ ಕಲ್ಪಿಸುವ ಇಲಾಖೆ ಇದಾಗಿದೆ. ಪಿಂಚಣಿ ಹಾಗೂ ರೈಲ್ವೆ ಕೆಲಸದ ವೆಚ್ಚಗಳಿಗೆ ಈ ಬಾರಿ ಹಣ ಹೆಚ್ಚಾಗಿ ಖರ್ಚಾಗಿದೆ.

ಹೊಸ ರೈಲುಗಳ ಮಾರ್ಗ ಅಳವಡಿಕೆ ಹಾಗೂ ರೈಲು ಬೋಗಿಗಳ ನಿರ್ಮಾಣದಿಂದಲೂ ಸಂಸ್ಥೆಗೆ ಹೆಚ್ಚಿನ ಹೊರೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲಾಖೆ ನಷ್ಟದಲ್ಲಿದೆ. ನಾಲ್ಕು ತಿಂಗಳುಗಳಲ್ಲಿ ಸುಮಾರು 17,736.09 ಕೋಟಿ ಸಂಗ್ರಹಿಸುವ ಇರಾದೆ ಇಲಾಖೆಯದ್ದಾಗಿತ್ತು. ಆದ್ರೆ, 17,273.37 ಕೋಟಿ ರೂಪಾಯಿ ಕ್ರೂಢೀಕರಿಸುವಲ್ಲಿ ಮಾತ್ರ ಇಲಾಖೆ ಸಫಲವಾಗಿದೆ. ಅಂದಾಜಿಸಲಾಗಿದ್ದ ಮಿತಿಯಲ್ಲೂ ಹಣ ಸೇರುತ್ತಿಲ್ಲ ಎಂಬುದು ಇಲಾಖೆಯ ತಲೆ ನೋವಾಗಿದೆ. ಇಲಾಖೆ ಸರಕು ಸಾಗಾಣೆ ರೈಲುಗಳಿಂದ ಸುಮಾರು 2773 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ.

2018ರ ಸಾಲಿನಲ್ಲಿ ಇಲಾಖೆ ಹಾಕಿಕೊಂಡ ಗುರಿಗಿಂತಲೂ ಕಡಿಮೆ ಹಣ ಸೇರಿದೆ. ರೈಲು ಇಲಾಖೆ ನಾಲ್ಕು ತಿಂಗಳುಗಳಲ್ಲಿ ಸುಮಾರು 61,902.51 ಕೋಟಿ ಸಂಗ್ರಹದ ನೀಲಿ ನಕ್ಷೆ ಹೊಂದಿತ್ತು. ಆದ್ರೆ, 56,717.84 ಕೋಟಿ ರೂ. ಮಾತ್ರ ಸಂಗ್ರಹಿಸಲು ಶಕ್ತವಾಗಿದೆ. ಇದ್ರಿಂದ ಸುಮಾರು 5184 ಕೋಟಿ ರೂ. ಇಲಾಖೆಗೆ ಹೊರೆಯಾಗಿದೆ ಎಂದು ತಿಳಿದು ಬಂದಿದೆ. ಇನ್ನು ಈ ನಾಲ್ಕು ತಿಂಗಳುಗಳಲ್ಲಿ ಅಂದಾಜಿಸಲಾಗಿದ್ದ ಖರ್ಚಿಗಿಂತಲೂ ಸುಮಾರು 2 ಸಾವಿರ ಕೋಟಿ ಹೆಚ್ಚು ಖರ್ಚಾಗಿದೆ. 7 ನೇ ವೇತನ ಆಯೋಗ ಜಾರಿಗೆ ಬಂದ ಮೇಲೂ ಸಂಬಳ ಪಿಂಚಣಿದಾರರಿಗೆ ನೀಡಬೇಕಾದ ಹಣದ ಹೊರೆ ಇಲಾಖೆಗೆ ಬಿದ್ದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...