alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಪ್ರಯಾಣಿಕರ ಸುರಕ್ಷತೆಗಾಗಿ ರೈಲು ನಿಲ್ದಾಣಗಳಲ್ಲಿ ಅಳವಡಿಕೆಯಾಗಲಿದೆ ಸಿಸಿ ಟಿವಿ

ರೈಲು ನಿಲ್ದಾಣದಲ್ಲಿ ಹಾಗೂ ಬೋಗಿಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲು ರೈಲ್ವೆ ಇಲಾಖೆ ಟೆಂಡರ್‌ ಕರೆದಿದೆ. ನಾಲ್ಕು ವಿಭಾಗದಲ್ಲಿರುವ ಎ1, ಎ, ಬಿ, ಸಿ, ಡಿ ಹಾಗೂ ಇ ವಿಭಾಗದಲ್ಲಿರುವ ಒಟ್ಟಾರೆ 6,124 ರೈಲ್ವೆ ನಿಲ್ದಾಣಗಳಲ್ಲಿ ಸುರಕ್ಷತೆ ನಿಟ್ಟಿನಲ್ಲಿ ಹೊಸ ವ್ಯವಸ್ಥೆ ಅಳವಡಿಸಲು ಟೆಂಡರ್‌ ಆಹ್ವಾನಿಸಲಾಗಿದ್ದು, ರೈಲ್‌ಟೆಲ್‌ ವೆಬ್‌ಸೈಟ್‌ನಲ್ಲಿ ಟೆಂಡರ್‌ ವಿವರಗಳನ್ನು ಪ್ರಕಟಿಸಲಾಗಿದೆ. ಸೆ.18 ಟೆಂಡರ್‌ಗೆ ಸ್ಪಂದಿಸಲು ಕೊನೆ ದಿನವಾಗಿದೆ.

ಸದ್ಯಕ್ಕೆ ಈ ಟೆಂಡರ್‌ನಲ್ಲಿ ಬೋಗಿಗಳಲ್ಲಿ ವ್ಯವಸ್ಥೆ ಅಳವಡಿಕೆ ಸೇರಿಕೊಂಡಿಲ್ಲ. ಸಂಪೂರ್ಣ ಎಚ್‌ಡಿ ಹಾಗೂ ಉತ್ತಮ ಗುಣಮಟ್ಟದ ಕ್ಯಾಮರಾಗಳನ್ನು ನೀಡುವಂತೆ ಟೆಂಡರ್‌ನಲ್ಲಿ ಹೇಳಲಾಗಿದೆ.

ಮುಖ ಚಹರೆ ಪತ್ತೆ ತಂತ್ರಜ್ಞಾನ

ಕ್ಯಾಮರಾಗಳು ಕೇವಲ ನಿಲ್ದಾಣದಲ್ಲಿನ ವಿಡಿಯೋಗಳನ್ನು ಚಿತ್ರೀಕರಿಸಲು ಸೀಮಿತವಾಗಿಲ್ಲ. ಬದಲಾಗಿ ಫೇಷಿಯಲ್‌ ರೆಕಗ್ನಿಷನ್‌ ಸಾಫ್ಟ್‌ವೇರ್‌ ಸಹ ಅಳವಡಿಸಲಾಗುತ್ತಿದೆ. ಇವುಗಳ ನಿರ್ವಹಣೆಯನ್ನು ರೈಲ್ವೆ ಭದ್ರತಾ ಪಡೆಗಳೇ ಮಾಡಲಿದೆ.

ಉತ್ತರ ವಿಭಾಗಕ್ಕೆ 24,074, ಪಶ್ಚಿಮಕ್ಕೆ 16,813, ದಕ್ಷಿಣ ವಿಭಾಗಕ್ಕೆ 20,847 ಹಾಗೂ ಪೂರ್ವ ವಿಭಾಗಕ್ಕೆ 28,111 ಕ್ಯಾಮರಾಗಳನ್ನು ಅಳವಡಿಸಲು ಟೆಂಡರ್‌ ಕರೆಯಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ 11 ಸಾವಿರ ರೈಲುಗಳಲ್ಲಿ ಹಾಗೂ 8500 ನಿಲ್ದಾಣಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಲು 3 ಸಾವಿರ ಕೋಟಿ ರೂ. 2018-19ರ ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...