alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ರೈಲ್ವೆ ನಿಲ್ದಾಣದ ವೇಟಿಂಗ್ ರೂಮಿನಲ್ಲಿ ಕುಳಿತುಕೊಳ್ಳಲು ನೀಡಬೇಕು ಶುಲ್ಕ…!

ರೈಲ್ವೆ ನಿಲ್ದಾಣದ ಎಸಿ ವೇಟಿಂಗ್ ರೂಮಿನಲ್ಲಿ ಕುಳಿತು ರೈಲಿಗಾಗಿ ಕಾಯುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ನಿಮ್ಮ ಜೊತೆ ಮಕ್ಕಳಿದ್ದು, ಅವ್ರನ್ನು ವೇಟಿಂಗ್ ರೂಮಿಗೆ ಕರೆದೊಯ್ಯುತ್ತೀರೆಂದಾದ್ರೆ ಮಕ್ಕಳಿಗೂ ನೀವು ಹಣ ನೀಡಬೇಕಾಗುತ್ತದೆ. ವೇಟಿಂಗ್ ರೂಮಿನಲ್ಲಿ ವಿಶ್ರಾಂತಿ ಪಡೆಯುವ ಮಕ್ಕಳಿಗೂ ಚಾರ್ಜ್ ಮಾಡಲು ರೈಲ್ವೆ ಇಲಾಖೆ ತಯಾರಿ ನಡೆಸಿದೆ.

ದೆಹಲಿ ಅಥವಾ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ಆರಂಭಿಕ ಹಂತವಾಗಿ ಈ ಯೋಜನೆ ಜಾರಿಗೆ ಬರಲಿದೆ. ರೈಲ್ವೆಯ ಹೊಸ ನಿಯಮದ ಪ್ರಕಾರ ಫಸ್ಟ್ ಎಸಿ, ಸೆಕೆಂಡ್ ಎಸಿ ಹಾಗೂ ಥರ್ಡ್ ಎಸಿ ಕೋಣೆಯಲ್ಲಿ ವಿಶ್ರಾಂತಿ ಪಡೆಯುವ 12 ವರ್ಷ ಮೇಲ್ಪಟ್ಟ ಪ್ರಯಾಣಿಕರು ಪ್ರತಿ ಗಂಟೆಗೆ 20 ರೂಪಾಯಿ ಪಾವತಿಸಬೇಕು. ಐದು ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ ಪ್ರತಿ ಗಂಟೆಗೆ 10 ರೂಪಾಯಿ ವಸೂಲಿ ಮಾಡಲಾಗುವುದು. ಐದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕ ವಿಧಿಸದಿರಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಸ್ಲೀಪರ್ ಶ್ರೇಣಿಯ ವೇಟಿಂಗ್ ರೂಮಿನಲ್ಲಿ ಮಕ್ಕಳಿಂದ ಹಿಡಿದು ಹಿರಿಯ ಪ್ರಯಾಣಿಕರವರೆಗೆ ಯಾರೂ ಶುಲ್ಕ ನೀಡಬೇಕಾಗಿಲ್ಲ. ರೈಲು ಸಿಬ್ಬಂದಿ ಯಾವುದೇ ವೇಟಿಂಗ್ ರೂಮಿನಲ್ಲಿ 1 ಗಂಟೆ ಉಚಿತವಾಗಿ ಕಳೆಯಬಹುದು. ನಂತ್ರ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...