alex Certify
ಕನ್ನಡ ದುನಿಯಾ       Mobile App
       

Kannada Duniya

92 ಪೈಸೆಗೆ 10 ಲಕ್ಷ ರೂ. ವಿಮೆ ರಕ್ಷಣೆ

railw

ನವದೆಹಲಿ: ಆಗಸ್ಟ್ 31 ರಿಂದ ರೈಲ್ವೇ ಪ್ರಯಾಣಿಕರಿಗೆ ಹೊಸ ಸೌಲಭ್ಯ ಸಿಗಲಿದೆ. ಕೇವಲ 92 ಪೈಸೆ ಪ್ರೀಮಿಯಂ ಪಾವತಿಸಿ ನೀವು ಗರಿಷ್ಠ 10 ಲಕ್ಷ ರೂಪಾಯಿವರೆಗೆ ವಿಮೆ ಪಡೆಯಬಹುದಾಗಿದೆ.

ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವ ರೈಲ್ವೇ ಪ್ರಯಾಣಿಕರು ಪ್ರತಿ ಟಿಕೆಟ್ ಜೊತೆಯಲ್ಲಿ 92 ಪೈಸೆಯನ್ನು ಹೆಚ್ಚುವರಿಯಾಗಿ ಪಾವತಿಸಬೇಕು. ರೈಲ್ವೇ ಸಚಿವ ಸುರೇಶ್ ಪ್ರಭು ಬಜೆಟ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ರೈಲ್ವೇ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ವಿಮೆ ರಕ್ಷಣೆ ಸೌಲಭ್ಯ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಆಗಸ್ಟ್ 31 ರಿಂದ ಈ ಸೌಲಭ್ಯವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ.

ಭಾರತೀಯ ರೈಲ್ವೇಯ ಐ.ಆರ್.ಸಿ.ಟಿ.ಸಿ. ವೆಬ್ ಸೈಟ್ ನ ಮೂಲಕ ರೈಲ್ವೇ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರು ಪ್ರತಿ ಟಿಕೆಟ್ ಗೆ ಹೆಚ್ಚುವರಿಯಾಗಿ 92 ಪೈಸೆಯನ್ನು ಪಾವತಿಸಬೇಕು. ರೈಲ್ವೇ ಪ್ರಯಾಣದ ಸಂದರ್ಭದಲ್ಲಿ ಅವಘಡವಾದಲ್ಲಿ 10 ಲಕ್ಷ ರೂ.ವರೆಗೆ ವಿಮೆ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...