alex Certify
ಕನ್ನಡ ದುನಿಯಾ       Mobile App
       

Kannada Duniya

ಪೇಟಿಎಂ ಮನಿ ಆಪ್ ಮೂಲಕ ಮ್ಯೂಚುವಲ್ ಫಂಡ್ ಖರೀದಿಗೆ ಮುಗಿಬಿದ್ದ ಜನ

ಪೇಟಿಎಂ ಮನಿ ಆಪ್ ಶುರುವಾಗಿದೆ. ಇದ್ರಲ್ಲಿ ಜನರು ಮ್ಯೂಚುವಲ್ ಫಂಡ್ ಖರೀದಿ ಮಾಡಬಹುದಾಗಿದೆ. ದೇಶದಲ್ಲಿ ಮ್ಯೂಚುವಲ್ ಫಂಡ್ ಗೆ ಹಣ ಹಾಕುವವರ ಸಂಖ್ಯೆ ಕಡಿಮೆ. ಆದ್ರೆ ಪೇಟಿಎಂ ಮನಿ ಆಪ್ ಮೂಲಕ ಸುಲಭವಾಗಿ ಮ್ಯೂಚುವಲ್ ಫಂಡ್ ಹಾಕಬಹುದು. ಒಂದು ವೇಳೆ ಪೇಟಿಎಂ ಮನಿ ಆಪ್ ಮೂಲಕ ನೀವೂ ಮ್ಯೂಚುವಲ್ ಫಂಡ್ ಶುರುಮಾಡುವ ಯೋಚನೆಯಲ್ಲಿದ್ದರೆ ಸ್ವಲ್ಪ ಸಮಯ ಕಾಯಲೇಬೇಕು.

ಪೇಟಿಎಂ ಮನಿ ಆಪ್ ಡೌನ್ಲೋಡ್ ಆದ ತಕ್ಷಣ ಮ್ಯೂಚುವಲ್ ಫಂಡ್ ಹಾಕಲು ಸಾಧ್ಯವಿಲ್ಲ. ವೇಟಿಂಗ್ ಲಿಸ್ಟ್ ನಲ್ಲಿ ಇರಬೇಕಾಗುತ್ತದೆ. ಯಾಕೆಂದ್ರೆ ನಿಮ್ಮ ಮುಂದೆ 8.5 ಲಕ್ಷ ಮಂದಿ ಮ್ಯೂಚುವಲ್ ಫಂಡ್ ಹಾಕಲು ಕಾದಿದ್ದಾರೆ. ಯಸ್, ಪೇಟಿಎಂ ಮನಿ ಆಪ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆರಂಭದಲ್ಲಿ 2500 ಗ್ರಾಹಕರಿಗೆ ಅವಕಾಶ ನೀಡುತ್ತಿದೆ. ನಂತ್ರ ಆ ಸಂಖ್ಯೆಯನ್ನು 10 ಸಾವಿರಕ್ಕೆ ಏರಿಕೆ ಮಾಡಲಿದೆಯಂತೆ.

ಪೇಟಿಎಂ ಮನಿ ಆಪ್ ಮೂಲಕವೇ ನೀವು ಮ್ಯೂಚುವಲ್ ಫಂಡ್ ಹಾಕುವವರಿದ್ದರೆ ಇನ್ನೆರಡು ತಿಂಗಳಾದ್ರೂ ಕಾಯಲೇಬೇಕು. ದಿನಕ್ಕೆ 2500 ಗ್ರಾಹಕರಿಗೆ ಮಾತ್ರ ಅವಕಾಶ ಸಿಗ್ತಿರುವುದ್ರಿಂದ ತಿಂಗಳಿಗೆ 75000 ಗ್ರಾಹಕರು ಮಾತ್ರ ಇದ್ರಲ್ಲಿ ಜಾಗ ಪಡೆಯಲಿದ್ದಾರೆ. ಶೀಘ್ರವೇ ಮ್ಯೂಚುವಲ್ ಫಂಡ್ ಖರೀದಿ ಮಾಡಬಯಸುವವರು ಬೇರೆ ಮಾರ್ಗಗಳನ್ನು ಹಿಡಿಯುವುದು ಸೂಕ್ತ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...