alex Certify
ಕನ್ನಡ ದುನಿಯಾ       Mobile App
       

Kannada Duniya

ಪಂಜಾಬ್ ನ್ಯಾಶನಲ್ ಬ್ಯಾಂಕ್ ನಲ್ಲಿ ಭಾರೀ ವಂಚನೆ

ವಾಣಿಜ್ಯ ನಗರಿ ಮುಂಬೈನಲ್ಲಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್ ಶಾಖೆಯಲ್ಲಿ ಬರೋಬ್ಬರಿ 1.8 ಬಿಲಿಯನ್ ಡಾಲರ್ ವಂಚನೆ ನಡೆದಿದೆ. ಒಂದೇ ಶಾಖೆಯಲ್ಲಿ ಭಾರೀ ಮೊತ್ತದ ಅಕ್ರಮ ವಹಿವಾಟು ನಡೆದಿರುವುದಾಗಿ ಬ್ಯಾಂಕ್ ಮಾಹಿತಿ ನೀಡಿದೆ.

ಕೆಲವೇ ಕೆಲವು ನಿರ್ದಿಷ್ಟ ಗ್ರಾಹಕರ ಲಾಭಕ್ಕಾಗಿ ಈ ರೀತಿ ಮಾಡಲಾಗಿದೆ. ಆ ಗ್ರಾಹಕರು ಕಪ್ಪುಹಣವನ್ನು ವಿದೇಶಕ್ಕೆ ಟ್ರಾನ್ಸ್ ಫರ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣ ಉಳಿದ ಬ್ಯಾಂಕ್ ಗಳಿಗೂ ಹೊಡೆತ ನೀಡುವ ಸಾಧ್ಯತೆ ಇದೆ.

ಯಾಕಂದ್ರೆ ವಿದೇಶ ವಿನಿಮಯ ಒಪ್ಪಂದಗಳ ನಿಯಮ ಉಲ್ಲಂಘಿಸಿದ್ದಕ್ಕೆ ಪಂಬಾಜ್ ನ್ಯಾಶನಲ್ ಬ್ಯಾಂಕ್ ಹಾಗೂ ಇತರ 12 ಬ್ಯಾಂಕ್ ಗಳಿಗೆ 1 ಬಿಲಿಯನ್ ಡಾಲರ್ ದಂಡ ಹಾಕಲಾಗಿತ್ತು. ಪಂಜಾಬ್ ನ್ಯಾಶನಲ್ ಬ್ಯಾಂಕ್ ನಲ್ಲಿ ನಡೆದಿರೋ ವಂಚನೆ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...