alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಲ ಮಾಡಿ ಖರೀದಿಸಿದ್ದ ಲಾಟರಿ ಟಿಕೆಟಿಗೆ ಒಲಿದಿದೆ 1.5 ಕೋಟಿ ರೂಪಾಯಿ…!

ಅದೃಷ್ಟ ಎನ್ನುವುದು ಯಾವ ರೂಪದಲ್ಲಿ ಬೇಕಾದರೂ ಬರಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕೂಲಿ ಕಾರ್ಮಿಕನೊಬ್ಬ ತನ್ನ ಬಳಿ ಹಣವಿಲ್ಲದಿದ್ದರೂ 200 ರೂ. ಸಾಲ ಮಾಡಿ ಲಾಟರಿ ಟಿಕೆಟ್ ಖರೀದಿಸಿದ್ದು, ಅದಕ್ಕೀಗ 1.5 ಕೋಟಿ ರೂಪಾಯಿ ಬಹುಮಾನ ಲಭಿಸಿದೆ.

ಪಂಜಾಬಿನಲ್ಲಿ ಈ ಘಟನೆ ನಡೆದಿದ್ದು, ಸಂಗ್ರೂರ್ ಜಿಲ್ಲೆಯ ಮಾಂಡ್ವಿ ಗ್ರಾಮದ ಮನೋಜ್ ಕುಮಾರ್ ಎಂಬ ಕೂಲಿ ಕಾರ್ಮಿಕ 200 ರೂ. ಸಾಲ ಮಾಡಿ ಪಂಜಾಬ್ ಸರ್ಕಾರದ ರಾಕಿ ಬಂಪರ್ ಲಾಟರಿ ಟಿಕೆಟ್ ಖರೀದಿ ಮಾಡಿದ್ದ.

ಆಗಸ್ಟ್ 29 ರಂದು ಇದರ ಡ್ರಾ ನಡೆದಿದ್ದು, ಮನೋಜ್ ಕುಮಾರ್ ಖರೀದಿಸಿದ ಟಿಕೆಟ್ ಗೆ 1 ಕೋಟಿ ರೂ. ಬಹುಮಾನ ಲಭಿಸಿದೆ. ಮನೋಜ್ ಕುಮಾರ್, ಬಹುಮಾನದ ಟಿಕೆಟನ್ನು ಈಗಾಗಲೇ ಲಾಟರಿ ನಿರ್ದೇಶನಾಲಯಕ್ಕೆ ಸಲ್ಲಿಸಿದ್ದು, ಶೀಘ್ರದಲ್ಲೇ ಹಣ ಪಾವತಿಸುವುದಾಗಿ ಆತನಿಗೆ ತಿಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...