alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಎಸ್ ಟಿಯಿಂದ ಹೊರಗುಳಿಯಲಿದೆ ಈ ಪೂಜಾ ಸಾಮಗ್ರಿ

puja_750_1496636618_749x421

ಖಾದಿ ನೂಲು, ಗಾಂಧಿ ಟೋಪಿ, ರಾಷ್ಟ್ರಧ್ವಜ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ)ವ್ಯವಸ್ಥೆಯಿಂದ ದೂರವಿರಲಿದೆ. ಕೃತಕ ಆಭರಣ, ಮಣಿಗಳು ಹಾಗೂ ನಾಣ್ಯಗಳ ಮೇಲೆ ಶೇಕಡಾ 3ರಷ್ಟು ಶುಲ್ಕ ಬೀಳಲಿದೆ. ಇದಲ್ಲದೆ ಪೂಜಾ ಸಾಮಗ್ರಿಯಾಗಿ ಬಳಸುವ ರುದ್ರಾಕ್ಷಿ, ಪಾದುಕೆ, ಪಂಚಾಮೃತ, ತುಳಸಿ ಮಾಲೆ, ಪವಿತ್ರ ದಾರ ಹಾಗೂ ವಿಭೂತಿಯಂತಹ ಪೂಜಾ ಸಾಮಗ್ರಿಗಳು ಜಿಎಸ್ ಟಿ ವ್ಯವಸ್ಥೆಯಿಂದ ಹೊರಗುಳಿಯಲಿವೆ.

ಶ್ರೀಗಂಧದ ತಿಲಕ, ಬ್ರಾಂಡ್ ಇಲ್ಲದ ಜೇನುತುಪ್ಪ, ದೀಪದ ಬತ್ತಿಗೆ ಜುಲೈ 1ರಿಂದ ಜಾರಿಯಾಗಲಿರುವ ಜಿಎಸ್ ಟಿ ವ್ಯವಸ್ಥೆಯಲ್ಲಿ ರಿಯಾಯಿತಿ ಸಿಗಲಿದೆ. ಸಾಂಬ್ರಾಣಿ, ಕಲ್ಲುಸಕ್ಕರೆ ಹಾಗೂ ಮಿಠಾಯಿಗೆ ಶೇಕಡಾ 5ರಷ್ಟು ತೆರಿಗೆ ವಸೂಲಿ ಮಾಡಲಾಗುವುದು. ಬಟ್ಟೆ ವಿಚಾರಕ್ಕೆ ಬಂದಲ್ಲಿ ಸಾವಿರ ರೂಪಾಯಿ ಕಡಿಮೆ ಬೆಲೆಯ ಕಂಬಳಿ, ಪರದೆ, ಹಾಸಿಗೆ ಹಾಗೂ ಟವೆಲ್ ಗೆ ಶೆಕಡಾ 5ರಷ್ಟು ತೆರಿಗೆ ಬೀಳಲಿದೆ. ಸಾವಿರ ರೂಪಾಯಿಗಿಂತ ಹೆಚ್ಚು ಬೆಲೆಯ ವಸ್ತುಗಳಿಗೆ ಶೇಕಡಾ 12ರಷ್ಟು ತೆರಿಗೆ ವಿಧಿಸಲಾಗುವುದು.

ಒಂದು ಸಾವಿರ ರೂಪಾಯಿ ಬೆಲೆಯ ಮಾನವ ನಿರ್ಮಿತ ವಸ್ತುಗಳ ಮೇಲೆ ಶೇಕಡಾ 5ರಷ್ಟು ತೆರಿಗೆ ಬೀಳಲಿದೆ. ಇದು ಈಗಿನ ತೆರಿಗೆಗಿಂತ ಶೇಕಡಾ 7ರಷ್ಟು ಕಡಿಮೆಯಾಗಲಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಯಾವ ವಸ್ತುಗಳಿಗೆ ಯಾವ ಪ್ರಮಾಣ ತೆರಿಗೆ ವಿಧಿಸಬೇಕೆಂಬುದನ್ನು ಬಹುತೇಕ ನಿರ್ಧರಿಸಲಾಗಿದೆ. ಈ ಸಭೆಯಲ್ಲಿ ಅರುಣ್ ಜೇಟ್ಲಿ ಜೊತೆ ರಾಜ್ಯದ ಹಣಕಾಸು ಸಚಿವರು ಉಪಸ್ಥಿತರಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...