alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಅನುಭವಿಸಿರೋ ನಷ್ಟವೆಷ್ಟು ಗೊತ್ತಾ?

2017-18 ನೇ ಹಣಕಾಸು ವರ್ಷದಲ್ಲಿ ದೇಶದ ಒಟ್ಟು 21 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಪೈಕಿ 19 ಬ್ಯಾಂಕ್ ಗಳು ನಷ್ಟ ಅನುಭವಿಸಿದ್ದು, 2 ಬ್ಯಾಂಕುಗಳು ಮಾತ್ರ ಲಾಭ ಗಳಿಸಿವೆ.

19 ಬ್ಯಾಂಕ್ ಗಳ ನಷ್ಟದ ಮೊತ್ತ ಬರೋಬ್ಬರಿ 87 ಸಾವಿರ ಕೋಟಿ ರೂಪಾಯಿಗಳೆಂದು ಹೇಳಲಾಗಿದ್ದು, ಈ ಪೈಕಿ ಪಂಜಾಬ್ ನ್ಯಾಷನಲ್ ಬ್ಯಾಂಕ್ 12,283 ಕೋಟಿ ರೂಪಾಯಿ ನಷ್ಟದೊಂದಿಗೆ ಮೊದಲ ಸ್ಥಾನದಲ್ಲಿದೆ.

ಲಾಭ ಗಳಿಸಿರುವ ಬ್ಯಾಂಕ್ ಗಳ ಪೈಕಿ ವಿಜಯಾ ಬ್ಯಾಂಕ್ 727 ಕೋಟಿ ರೂಪಾಯಿ ಮತ್ತು ಇಂಡಿಯನ್ ಬ್ಯಾಂಕ್ 1,259 ಕೋಟಿ ರೂಪಾಯಿ ಲಾಭ ಗಳಿಸಿವೆ.

ಸಾಲ ವಸೂಲಾತಿಗೆ ಬ್ಯಾಂಕ್ ಗಳು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ವಸೂಲಾಗದ ದೊಡ್ಡಮಟ್ಟದ ಸಾಲಗಳನ್ನು ಕಾಲಮಿತಿಯೊಳಗೆ ಬಗೆಹರಿಸಿಕೊಳ್ಳಬೇಕು ಇಲ್ಲವಾದಲ್ಲಿ ದಿವಾಳಿ ಸಂಹಿತೆಯಡಿ ಸಾಲ ವಸೂಲಾತಿ ಪ್ರಕ್ರಿಯೆ ಕೈಗೊಳ್ಳುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...